ಅಪ್ಪ ಅಮೀರ್‌ ಖಾನ್‌ ಮೇಲೆ ಕುಳಿತ ಮಗಳು : ಟ್ರೋಲಿಗರ ಕೆಂಗಣ್ಣಿಗೆ ಗುರಿಯಾದ ಮಿಸ್ಟರ್‌ ಪರ್ಫೆಕ್ಟ್….

ಅಮೀರ್ ಖಾನ್‌ ಹಾಗೂ ಅವರ ಮಗಳ ಫೋಟೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಸದ್ಯ ಆ ಫೋಟೋ ಟ್ರೋಲ್‌ಗೆ ಒಳಗಾಗಿದ್ದು, ಎಲ್ಲೆಡೆ ಪರ-ವಿರೋಧದ ಚರ್ಚೆ ಪ್ರಾರಂಭವಾಗಿದೆ.

ಇತ್ತೀಚೆಗಷ್ಟೇ ಅಮೀರ್ ಖಾನ್‌ ಸಂಬಂಧಿ ಮನ್ಸೂರ್‌ ಖಾನ್‌ ಅವರ 60ನೇ ಹುಟ್ಟುಹಬ್ಬವನ್ನು ಸೆಲೆಬ್ರೇಟ್‌ ಮಾಡಲು ಅವರ ಫಾರ್ಮ್‌ಹೌಸ್‌ಗೆ ಅಮೀರ್ ಖಾನ್ ಕುಟುಂಬ ಭೇಟಿ ನೀಡಿತ್ತು. ಈ ವೇಳೆ ಕ್ಲಿಕ್ಕಿಸಿದ್ದ ಕೆಲ ಫೋಟೋಗಳನ್ನು ಅಮೀರ್ ಖಾನ್ ತಮ್ಮ ಫೇಸ್‌ಬುಕ್‌ಗೆ ಅಪ್‌ಲೋಡ್‌ ಮಾಡಿದ್ದರು. ಆ ಫೋಟೋಗಳ ಪೈಕಿ ಮಗಳ ಜೊತೆಗಿದ್ದ ಒಂದು ಫೋಟೋ ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ.

ಫೋಟೋದಲ್ಲಿ ಅಮೀರ್‌ ಖಾನ್‌ ಅವರ ಮೇಲೆ ಅವರ ಪುತ್ರಿ ಇರಾ ಖಾನ್ ಕುಳಿತಿದ್ದು, ಇದನ್ನು ನೋಡಿದ ಸಂಪ್ರದಾಯವಾದಿಗಳು ಅಮೀರ್ ಖಾನ್‌ ಮುಸ್ಲಿಂ ಧರ್ಮ ಪಾಲಿಸುತ್ತಿದ್ದ. ಇರಾ ಕುಳಿತ ಭಂಗಿ ಕೆಟ್ಟದಾಗಿದೆ. ಇರಾ ಧರಿಸಿರುವ ಬಟ್ಟೆ ಸರಿಯಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನೆಗೆಟಿವ್ ಕಮೆಂಟ್ಸ್‌ ನೋಡಿದ ಅಮೀರ್ ಅಭಿಮಾನಿಗಳು ಅಮೀರ್‌ ಪರ ಬ್ಯಾಟಿಂಗ್‌ ಮಾಡಿದ್ದಾರೆ. ಅಪ್ಪ-ಮಗಳ ಅನ್ಯೂನ್ಯತೆ ನೋಡಿ ಕಲಿಯಿರಿ. ಅದರಲ್ಲೂ ಹುಳುಕು ಹುಡುಕುವ ನಿಮ್ಮ ಮನಸ್ಥಿತಿಗೆ ಧಿಕ್ಕಾರ ಎಂದು ಕಿಡಿ ಕಾರಿದ್ದಾರೆ.

 

One thought on “ಅಪ್ಪ ಅಮೀರ್‌ ಖಾನ್‌ ಮೇಲೆ ಕುಳಿತ ಮಗಳು : ಟ್ರೋಲಿಗರ ಕೆಂಗಣ್ಣಿಗೆ ಗುರಿಯಾದ ಮಿಸ್ಟರ್‌ ಪರ್ಫೆಕ್ಟ್….

Leave a Reply

Your email address will not be published.