ಶ್ರೀದೇವಿ ಎಕ್ಸಿಲೆನ್ಸಿ ಪ್ರಶಸ್ತಿಗೆ ಭಾಜನರಾದ ಬಾಲಿವುಡ್‌ ಸುಂದರಿ ಪ್ರಿಯಾಂಕಾ ಛೋಪ್ರಾ

ಮುಂಬೈ : ಬಾಲಿವುಡ್‌ ಬೆಡಗಿ ಪ್ರಿಯಾಂಕಾ ಛೋಪ್ರಾ ಅವರಿಗೆ ಜಾರ್ಖಂಡ್‌ನ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಶ್ರೀದೇವಿ ಎಕ್ಸಿಲೆನ್ಸಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಪಿಗ್ಗಿ ಪರ ಈ ಪ್ರಶಸ್ತಿಯನ್ನು ಅವರ ತಾಯಿ ಮಧು ಛೋಪ್ರಾ ಸ್ವೀಕರಿಸಿರುವುದಾಗಿ ತಿಳಿದುಬಂದಿದೆ. ತಮಗೆ ಶ್ರೀದೇವಿ ಹೆಸರಿನ ಪ್ರಶಸ್ತಿ ಲಭಿಸಿರುವುದಕ್ಕೆ ಅಮೆರಿಕದಲ್ಲಿರುವ ಪ್ರಿಯಾಂಕಾ ವಿಡಿಯೋ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.

ಇತ್ತೀಚೆಗಷ್ಟೇ ಮೃತಪಟ್ಟಿದ್ದ  ನಟಿ ಶ್ರೀದೇವಿ ಅವರ ಗೌರವಾರ್ಥವಾಗಿ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಅವರ ಹೆಸರಿನ ಪ್ರಶಸ್ತಿ ನನಗೆ ಲಭಿಸಿದ್ದು, ನಿಜಕ್ಕೂ ಇದು ನನ್ನ ಪುಣ್ಯ ಎಂದಿದ್ದಾರೆ.

ಸದ್ಯ ಪಿಗ್ಗಿ ಹಾಲಿವುಡ್‌ ಸಿನಿಮಾಗಳಲ್ಲಿ, ಕ್ವಾಂಟಿಕೋ ಸೀರೀಸ್‌ನಲ್ಲಿ ನಟಿಸುತ್ತಿದ್ದು, ಸದ್ಯ ಬಾಲಿವುಡ್‌ನ ಸಲ್ಮಾನ್‌ ಖಾನ್‌ ಅಭಿನಯಿಸುತ್ತಿರುವ ಭಾರತ್‌ ಸಿನಿಮಾಗೆ ನಾಯಕಿಯಾಗಿ ನಟಿಸಲು ಒಪ್ಪಿಗೆ ಸೂಚಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com