ಕಮರಿದ “ಕನಸು” : ಎರ್ಮಾಯ್‌ ಫಾಲ್ಸ್‌ಗೆ ಬಿದ್ದು ಸಾವಿಗೀಡಾದ ನಿರ್ದೇಶಕ

ಮಂಗಳೂರು : ದಕ್ಷಿಣ ಕನ್ನಡದಲ್ಲಿ ಸುರಿಯುತ್ತಿರುವ ಮಹಾಮಳೆಗೆ  ಸ್ಯಾಂಡಲ್‌ವುಡ್‌ನ ನಿರ್ದೇಶಕರೊಬ್ಬರು ಬಲಿಯಾಗಿದ್ದಾರೆ.

ಕನಸು ಸಿನಿಮಾದ ನಿರ್ದೇಶಕ ಸಂತೋಷ್  ಶೆಟ್ಟಿ  ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿನ ಎರ್ಮಾಯ್ ಫಾಲ್ಸ್ ಗೆ ಫೋಟೋಶೂಟ್ ಗಾಗಿ ಸ್ನೇಹಿತರ ಜೊತೆ ತೆರಳಿದ್ದರು.

ಬೆಳಗ್ಗೆ 8 ಗಂಟೆ ಸುಮಾರಿಗೆ ಸಂತೋಷ್ ಶೆಟ್ಟಿ ಫೋಟೋ ಶೂಟ್ ಗಾಗಿ ಎರ್ಮಾಯ್ ಫಾಲ್ಸ್ ಗೆ ಬಂದಿದ್ದರು. ಫೋಟೋ ಶೂಟ್ ಮಾಡುತ್ತಿದ್ದಾಗ ನೀರಿನ ಹರಿವು ಹೆಚ್ಚಾಗಿದ್ದರಿಂದ ಕಾಲುಜಾರಿ ಬಿದ್ದು ಫಾಲ್ಸ್ ನಲ್ಲಿ ಮುಳುಗಿದ್ದಾರೆ.
ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಸಂತೋಷ್‌ ಶವವನ್ನು ಹೊರತೆಗೆದಿದ್ದಾರೆ.

ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

Leave a Reply

Your email address will not be published.