ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣ : ಕೋರ್ಟ್‌ಗೆ 650 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಸಿದ ಎಸ್‌ಐಟಿ

ಬೆಂಗಳೂರು : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಐಟಿ 650 ಪುಟಗಳ ಚಾರ್ಜ್‌ಶೀಟನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.

ಶಂಕಿತ ಆರೋಪಿ ನವೀನ್ ಅಲಿಯಾಸ್ ಹೊಟ್ಟೆ ಮಂಜನ ಹೇಳಿಕೆಗಳು ದೋಷಾರೋಪ ಪಟ್ಟಿಯಲ್ಲಿ ದಾಖಲಾಗಿವೆ. ಗೌರಿ ಲಂಕೇಶ್ ಹತ್ಯೆಗೆ ಶಂಕಿತ ಆರೋಪಿ ಸಹಾಯ ಮಾಡಿದ್ದಾನಾ? ಇಡೀ ಘಟನಾವಳಿಗಳು ಗೊತ್ತಿದ್ರೂ ಮಂಪರು ಪರೀಕ್ಷೆಗೆ ಒಪ್ಪದಿರೋದು ಯಾಕೆ? ಈ ಎಲ್ಲ ಮಾಹಿತಿಗಳನ್ನು ದೋಪಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.

ಸುದೀರ್ಘ 9 ತಿಂಗಳ ತನಿಖೆ ನಡೆಸಿದ ಎಸ್​ಐಟಿ 650 ಪುಟಗಳ ಚಾರ್ಜ್​ಶೀಟ್​ ಸಿದ್ದಪಡಿಸಿದೆ. 3ನೇ ಎಸಿಎಂಎಂ ಕೋರ್ಟ್​ನಲ್ಲಿ ಇಂದು ಚಾಜ್​ಶೀಟ್​​ ಸಲ್ಲಿಸಿದ್ದು, ಕೇಸ್​ ಬಲಪಡಿಸಲು 131 ಮಂದಿಯ ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ವಿಶೇಷ ಅಭಿಯೋಜಕ S.V ಭಟ್ ನೇತ್ರತ್ವದಲ್ಲಿ ಸಲ್ಲಿಕೆ ಮಾಡಲಾಗಿದೆ.

 

Leave a Reply

Your email address will not be published.

Social Media Auto Publish Powered By : XYZScripts.com