ಕಾಂಗ್ರೆಸ್‌ಗೆ ಮಾನ ಮರ್ಯಾದೆ ಇಲ್ಲ, ಮಾಡಬಾರದ ಕೆಲ್ಸ ಮಾಡಿ ನುಸುಳಿಕೊಂಡು ಬರ್ತಾರೆ : S.R ಹಿರೇಮಠ್

ಹಾವೇರಿ : ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ್ ವಿರುದ್ದ ಎಸ್‌.ಆರ್‌ ಹಿರೇಮಠ್‌  ಗಂಭೀರ ಆರೋಪ ಮಾಡಿದ್ದಾರೆ. ಕೋಳಿವಾಡ್ ಒಬ್ಬ ಕ್ರಿಮಿನಲ್ ರಾಜಕಾರಣಿ. ಆತ ರಾಣೆಬೆನ್ನೂರಿನ ಸ್ಯಾಂಡ್ ಮಾಫಿಯಾದ ಸೂತ್ರದಾರ. ಕೋಳಿವಾಡನ ನ್ಯಾಶನಲ್ ಸ್ಕೂಲ್ ಸ್ಕ್ಯಾಂಡಲ್ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಸ್ಪೀಕರ್ ಆಗಿದ್ದಾಗ ಸ್ವಜನ ಪಕ್ಷಪಾತ ನಡೆಸಿ ಅಕ್ರಮ ನೇಮಕಾತಿ ಮಾಡಿದ್ದಾರೆ ಎಂದು ಆರೋಪಿಸಿರುವ ಹಿರೇಮಠ್‌, ವಿಧಾನಸಭಾ ಸಚಿವಾಲಯದಲ್ಲಿ ಕೋಳಿವಾಡ ಕರಪ್ಶನ್ ಗೋಲ್ಡ್ ಮೆಡಲಿಸ್ಟ್ ಆಗಿದ್ದಾರೆ.  ವಿಧಾನಸಭೆ ಸಚಿವಾಲಯದಲ್ಲಿ ಗೋಲ್ಡ್ ಮೆಡಲಿಸ್ಟ್ ಕರಪ್ಶನ್ ಅಧಿಕಾರಿಗಳಿದ್ದಾರೆ. ಇಂತಹ ಸಾರ್ವಜನಿಕ ಭ್ರಷ್ಟರನ್ನು ಅಟ್ಟಬೇಕು.

ಆನಂದ್ ಸಿಂಗ್ , ನಾಗೇಂದ್ರ ನಂತಹ ಕಡು ಭ್ರಷ್ಟರನ್ನು ಕಾಂಗ್ರೆಸ್ ಸೇರಿಸಿಕೊಂಡಿದೆ. ಕಾಂಗ್ರೆಸ್ ಅಕ್ರಮ ಗಣಿ ವಿರುದ್ಧ ಪಾದಯಾತ್ರೆ ಮಾಡಿತ್ತು. ಆದ್ರೆ ಗಣಿ ಭ್ರಷ್ಟರನ್ನೇ ಕಾಂಗ್ರೆಸ್ ಸೇರಿಸಿಕೊಂಡಿದೆ. ಕಾಂಗ್ರೆಸ್ ಗೆ ನಾಚಿಕೆ, ಮಾನ ಮರ್ಯಾದೆ ಇಲ್ಲ. ಮಾಡಬಾರದ ಕೆಲಸ ಮಾಡಿ ನುಸುಳಿಕೊಂಡು ಬರುತ್ತಾರೆ. ಇಂತಹ ಕ್ರಿಮಿನಲ್ ಗಳು ಯಾವತ್ತೂ ಅಧಿಕಾರ ಪಡಿಬಾರದು ಎಂದಿದ್ದಾರೆ.

Leave a Reply

Your email address will not be published.