ಮುಂಗಾರಿಗೆ ಮೋದಿ ಕೊಡುಗೆ : ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ 1ಪೈಸೆ ಇಳಿಕೆ !

ದೆಹಲಿ : 16 ದಿನಗಳಿಂದ ಏರಿಕೆಯಾಗುತ್ತಲೇ ಇದ್ದ ಪೆಟ್ರೋಲ್‌, ಡೀಸೆಲ್‌ ಬೆಲೆ 1 ಪೈಸೆ ಇಳಿಕೆಯಾಗಿದೆ.

ಪ್ರತಿದಿನ ತೈಲ ದರ ಪರಿಷ್ಕರಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ ವೆಬ್‍ಸೈಟ್ ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ 60 ಪೈಸೆ ಇಳಿಕೆಯಾದ ಬಗ್ಗೆ ವರದಿಯಾಗಿತ್ತು.

ಈ ಸುದ್ದಿ ಸಾಮಾಜಿಕ ಜಾಲತಾಣಗಳ ಮೂಲಕ ವೈರಲ್ ಆಗುತ್ತಿದ್ದಂತೆ ಸ್ಪಷ್ಟೀಕರಣ ನೀಡಿದ ಐಓಸಿ ವೆಬ್‍ಸೈಟ್ ನಲ್ಲಿದ್ದ ತಾಂತ್ರಿಕ ಸಮಸ್ಯೆಗಳಿಂದ ತಪ್ಪಾಗಿದೆ. ಇಂದು ಒಂದು ಪೈಸೆ ಇಳಿಕೆಯಾಗಿರುವುದಾಗಿ ತಿಳಿಸಿದೆ.

ಅಂತೆಯೇ ನಾಲ್ಕು ಮೆಟ್ರೋಪಾಲಿಟನ್‌ ನಗರಗಳಾಗಿರುವ ದಿಲ್ಲಿ, ಕೋಲ್ಕತ, ಮುಂಬಯಿ ಮತ್ತು ಚೆನ್ನೈನಲ್ಲಿ ಪೆಟ್ರೋಲ್‌ ದರ ಲೀಟರಿಗೆ ಅನುಕ್ರಮವಾಗಿ 78.42, 81.05, 86.25 ಮತ್ತು 81.42 ರೂ ಇರುವುದಾಗಿ ಐಓಸಿ ಅಧಿಕೃತವಾಗಿ ಹೇಳಿದೆ.

ಕಳೆದ 16 ದಿನಗಳಲ್ಲಿ ಪೆಟ್ರೋಲ್‍ಗೆ ಪ್ರತಿ ಲೀಟರ್‌ಗೆ 3.8 ರೂ. ಹಾಗೂ ಡೀಸಲ್‍ಗೆ 3.38 ರೂ. ಹೆಚ್ಚಾಗಿದೆ. ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರಲ್‍ಗೆ 75 ಡಾಲರ್‍ನಷ್ಟು ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಈಗ 1ಪೈಸೆ ಕಡಿತಗೊಂಡಿದೆ.

Leave a Reply

Your email address will not be published.

Social Media Auto Publish Powered By : XYZScripts.com