ಪ್ರೇಮಲೋಕದ ರವಿಮಾಮನಿಗೆ ಬರ್ತ್‌ಡೇ ಸಂಭ್ರಮ : ಅಭಿಮಾನಿಗಳೊಂದಿಗೆ ಸೆಲೆಬ್ರೇಟ್‌ ಮಾಡಿದ ರಣಧೀರ

ಕ್ರೇಜಿ ಸ್ಟಾರ್ ರವಿಚಂದ್ರನ್‌ ಇಂದು 57ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ರವಿಚಂದ್ರನ್ ಅಭಿಮಾನಿಗಳು ಅವರ ಮನೆ ಮುಂದೆ ನಿನ್ನೆ ರಾತ್ರಿಯಿಂದಲೇ ಜಮಾಯಿಸಿದ್ದು, ನೆಟ್ಟಿನ ನಟ ನ ಬರ್ತ್‌ಡೇಗೆ ವಿಶ್‌ ಮಾಡಿದ್ದಾರೆ.

ಇದೇ ವೇಳೆ ಮಾತನಾಡಿದ ರವಿಚಂದ್ರನ್, ಅಭಿಮಾನಿಗಳಿಗಾಗಿ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದೇನೆ. ಈಗ ಅಭಿಮಾನಿಗಳಿಗಾಗಿ 4 ಗಂಟೆ ನಿಂತ್ಕೊಂಡು ಬೇಕಾದರೂ ಫೋಟೋ ತೆಗಿಸಿಕೊಳ್ಳುತ್ತೀನಿ. ಈ ವರ್ಷ ಮತ್ತೆ ರಣಧೀರನನ್ನು ನೋಡ್ತೀರ. ಈ ಹಿಂದೆ ಮಂಜಿನ ಹನಿಯಿಂದ ದುಡ್ಡು ಕಳೆದುಕೊಂಡೆ. ಈಗ ಹೊಸ ಕಾನ್ಸೆಪ್ಟ್ ಜೊತೆ ಬರುವುದಾಗಿ ಹೇಳಿದ್ದಾರೆ.

ನನ್ನ ಹುಟ್ಟುಹಬ್ಬಕ್ಕೆ ಮಗಳು ಗಾಗಲ್ ಗಿಫ್ಟ್ ನೀಡಿದ್ದು, ನನ್ನಲ್ಲಿರುವ ಕ್ರೇಜಿ ಹೊರಬರಲಿ ಎಂದು ಗಂಡು ಮಕ್ಕಳು ಇಬ್ಬರು ಕ್ರೇಜಿ ಎಂದು ಇರುವ ಶರ್ಟ್ ಡಿಸೈನ್ ಮಾಡಿಕೊಟ್ಟಿದ್ದಾರೆ. ಮಗಳು ಗಿಫ್ಟ್ ಕೊಟ್ಟಿರೋದರಿಂದ ಪ್ರೀತಿಯಿಂದ ಹೋಟೆಲ್ ಒಳಗಡೆಯೇ ಹಾಕಿದ್ದೇನೆ. ಈಗ ಹಾಕಿರುವ ಶರ್ಟ್ ಕೂಡ ಮಕ್ಕಳೇ ನೀಡಿದ್ದು. ಇಲ್ಲಿ ಹುಟ್ಟುಹಬ್ಬ ಆಚರಣೆ ಮುಗಿಸಿಕೊಂಡ ನಂತರ ಫ್ಯಾಮಿಲಿ ಜತೆ ಗೋವಾಗೆ ತೆರಳುತ್ತಿರುವುದಾಗಿ ಹೇಳಿದ್ದಾರೆ.

ಇನ್ನು ಪಡ್ಡೆಹುಲಿ  ಚಿತ್ರತಂಡ ಕ್ರೇಜಿಸ್ಟಾರ್‌ ಹುಟ್ಟುಹಬ್ಬಕ್ಕೆ ಮೋಷನ್‌ ಪಿಕ್ಚರ್‌ ಬಿಡುಗಡೆ ಮಾಡಿದೆ.

Leave a Reply

Your email address will not be published.