ಸಾಲಮನ್ನಾ ಮಾಡೇ ಮಾಡ್ತೀನಿ : ಕುಮಾರಸ್ವಾಮಿ ಭರವಸೆ : ಯಾವಾಗ….ಹೇಗೆ…ಇಲ್ಲಿದೆ ಡಿಟೇಲ್ಸ್‌

ಬೆಂಗಳೂರು : ರೈತರ ಕೃಷಿ ಸಾಲವನ್ನು ಮನ್ನಾ ಮಾಡುವ ಸಲುವಾಗಿ ನನಗಿನ್ನೂ 15 ದಿನ ಕಾಲಾವಕಾಶ ನೀಡಿ ಎಂದು ಸಿಎಂ ಕುಮಾರಸ್ವಾಮಿ  ಮನವಿ ಮಾಡಿದ್ದಾರೆ.

ರಾಜ್ಯದ ರೈತ  ಮುಖಂಡರೊಂದಿಗೆ ಸಭೆ ನಡೆಸಿದ ಕುಮಾರಸ್ವಾಮಿ, 2009 ಏಪ್ರಿಲ್‌ 1ರಿಂದ 2017ರ ಡಿಸೆಂಬರ್‌ 31ರವರೆಗೆ ರೈತರು ಮಾಡಿರುವ ಎಲ್ಲಾ ಬೆಳೆಸಾಲ ಮನ್ನಾ, ಶ್ರೀಮಂತ  ರೈತರು 3 ವರ್ಷದ ಆದಾಯ ತೆರಿಗೆ ಪಾವತಿಸಿರುವ ರೈತರು, ವ್ಯಾಪಾರದ ಜೊತೆ  ಕೃಷಿ ಮಾಡುತ್ತಿರುವ ರೈತರ ಸಾಲ ಮನ್ನಾ ಮಾಡಬೇಕೇ, ಕೃಷಿಯೇತರ ಉದ್ದೇಶಕ್ಕೆ ಮಾಡಿರುವ ಸಾಲಮನ್ನಾ ಮಾಡಬೇಕೆ ಎಂಬ ಬಗ್ಗೆ ಚರ್ಚೆ ನಡೆಸುವುದಾಗಿ ಹೇಳಿದ್ದಾರೆ.

ಈ ವಿಚಾರದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿಯವರ ಸಲಹೆಯನ್ನೂ ಪಡೆಯಬೇಕು. ಇನ್ನು 15 ದಿನದೊಳಗೆ ಸೂಕ್ತರೀತಿಯಲ್ಲಿ ತೀರ್ಮಾನ ಕೈಗೊಳ್ಳುತ್ತೇನೆ. ರಾಜ್ಯದ ಬಜೆಟ್‌ 2 ಲಕ್ಷ ಕೋಟಿ, ಇದರಲ್ಲೇ ಸಾಲಮನ್ನಾ ಮಾಡಿ, ಸಮಾಜ ಕಲ್ಯಾಣ ಇಲಾಖೆ, ನೀರಾವರಿ, ಶಿಕ್ಷಣ ಸೇರಿದಂತೆ ಎಲ್ಲಾ ಕ್ಷೇತ್ರಗಳ ಯೋಜನೆಗಳಿಗೂ ಅನುದಾನ ನೀಡಬೇಕು ಎಂದಿದ್ದಾರೆ.

ಸಾಲಮನ್ನಾ ವಿಚಾರದಲ್ಲಿ ಏಕಾಏಕಿ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ರೈತ ಮುಖಂಡರು, ತಜ್ಞರ ಜೊತೆ ಸೇರಿಕೊಂಡು ಚರ್ಚಿಸಿ 10-15  ದಿನದಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ. ರಾಹುಲ್‌ ಗಾಂಧಿ ಇನ್ನೆರಡು ದಿನಗಳಲ್ಲಿ ದೆಹಲಿಗೆ ವಾಪಸ್ಸಾಗುತ್ತಾರೆ. ಅವರು ಬಂದ ಬಳಿಕ ಚರ್ಚೆ ನಡೆಸುತ್ತೇನೆ. ರಾಜ್ಯದ ರೈತರೂ ನನಗೆ ಸಲಹೆ  ನೀಡಬಕು ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com