ಸಾಲಮನ್ನಾಗೂ ಮುನ್ನ ರೈತರಿಗೆ ಮತ್ತೊಂದು ಸಿಹಿಸುದ್ದಿ ನೀಡಿದ ಕುಮಾರಸ್ವಾಮಿ !

ಬೆಂಗಳೂರು : ರಾಜ್ಯದ ರೈತರ ಸಾಲಮನ್ನಾ ಮಾಡುವ ವಿಚಾರ ಸಂಬಂಧ ಇಂದು ಸಿಎಂ ಕುಮಾರಸ್ವಾಮಿ ಎಲ್ಲಾ ಜಿಲ್ಲೆಗಳ ರೈತ ಮುಖಂಡರ ಸಭೆ ನಡೆಸಿದ್ದಾರೆ. ಈ ಮಧ್ಯೆ ಸಭೆಯಲ್ಲಿ ಸಿಎಂ ಕುಮಾರಸ್ವಾಮಿ ರೈತರಿಗೆ ಸಿಹಿ ಸುದ್ದಿ ನೀಡಿದ್ದು,  ಯಶಸ್ವಿನಿ ಯೋಜನೆಯನ್ನು ಈ ಹಿಂದಿನಂತೆ ಮುಂದುವರಿಸಿಕೊಂಡು ಹೋಗುವುದಾಗಿ ಘೋಷಣೆ ಮಾಡಿದ್ದಾರೆ.

ಯಶಸ್ವಿನಿ ಯೋಜನೆ ಮೇ 31 ಅಂದರೆ ನಾಳೆಗೆ ಮುಗಿಯಲಿದೆ. ಆದ್ದರಿಂದ ರೈತ ಮುಖಂಡರೊಬ್ಬರು ಈ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿ ಯಶಸ್ವಿನಿ ಯೋಜನೆ ಮುಂದುವರೆಸಬೇಕು ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಈ ಬಗ್ಗೆ ತಾವು ಈಗಾಗಲೇ ಅಧಿಕಾರಿಗಳೊಂದಿಗೆ ಮಾತನಾಡಿ ಯಶಸ್ವಿನಿ ಯೋಜನೆಯನ್ನು ಮುಂದುವರಿಸಿಕೊಂಡು ಹೋಗುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ. ಈ ಮೂಲಕ ರೈತರಿಗೆ ಸಾಲಮನ್ನಾ ಸಿಹಿ ನೀಡುವ ಮೊದಲು ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ.

Leave a Reply

Your email address will not be published.