ಬ್ಯಾಂಕ್‌ ನೌಕರರಿಂದ ಇಂದು, ನಾಳೆ ಪ್ರತಿಭಟನೆ : ವೇತನ ಪಡೆಯಲು ಎದುರಾಯ್ತು ಅಡಚಣೆ

ದೆಹಲಿ : ವೇತನ ಪರಿಷ್ಕರಣೆಗಾಗಿ 20  ಸರ್ಕಾರಿ ಒಡೆತನದ ಬ್ಯಾಂಕ್‌ಗಳು, 12  ಖಾಸಗಿ, 7 ವಿದೇಶಿ ಬ್ಯಾಂಕ್‌ಗ ಳ ಸಿಬ್ಬಂದಿ ಇಂದು ಹಾಗೂ ನಾಳೆ ದೇಶವ್ಯಾಪಿ ಮುಷ್ಕರ ನಡೆಸಲಿದ್ದಾರೆ.

ಈ ಹಿನ್ನೆಲೆಯಲ್ಲಿ ಬ್ಯಾಂಕ್‌ ವಹಿವಾಟು ಸ್ತಬ್ದಗೊಳ್ಳಲಿದ್ದು, ಗ್ರಾಹಕರು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಲಿದೆ. ದಿನನಿತ್ಯದ ವಹಿವಾಟಿಗೆ ಅಡಚಣೆಯಾಗಲಿದೆ.

ತಿಂಗಳ ಕೊನೆಯಾಗಿರುವ ಹಿನ್ನೆಲೆಯಲ್ಲಿ ಸಂಬಳ ಪಡೆಯುವವರಿಗೂ ತೊಂದರೆಯಾಗುತ್ತಿದೆ. ಎರಡು ದಿನ ಎಟಿಎಂನಲ್ಲಿ ಹಣ ಸಿಗುವುದು ಅನುಮಾನ ಎನ್ನಲಾಗುತ್ತಿದೆ.

ಇಂಡಿಯನ್ ಬ್ಯಾಂಕ್​ಗಳ ಅಸೋಸಿಯೇಷನ್ ಬ್ಯಾಂಕ್ ಉದ್ಯೋಗಿಗಳ ವೇತನವನ್ನು ಶೇಕಡಾ 2ರಷ್ಟು  ಹೆಚ್ಚಿಸುವುದಾಗಿ ಹೇಳಿರುವುದನ್ನು ವಿರೋಧಿಸಿ ಈ ಮುಷ್ಕರ ನಡೆಯುತ್ತಿದೆ. 2012 ರಲ್ಲಿ ಸಿಬ್ಬಂದಿಯ ಸಂಬಳ ಶೇಕಡಾ 15 ಏರಿಕೆ ಮಾಡಲಾಗಿತ್ತು. ಈ ಬಾರಿ ಶೇಕಡಾ 17.5 ಹೆಚ್ಚಳವಾಗುವ ನಿರೀಕ್ಷೆಯಿತ್ತು. ಆದರೆ ಆಗಿದ್ದು, ಕೇವಲ ಶೇ.2ರಷ್ಟು ಹೆಚ್ಚಿರುವ ಹಿನ್ನೆಲೆಯಲ್ಲಿ  ಸಿಟ್ಟಿಗೆದ್ದ ಬ್ಯಾಂಕ್​ ಸಿಬ್ಬಂದಿ ವೇತನ ಪರಿಷ್ಕರಣೆಗೆ ಆಗ್ರಹಿಸಿ ಮುಷ್ಕರ ನಡೆಸಲಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com