ಅಫ್ಘನ್‌ ಪ್ರಧಾನಿ ಬಳಿಕ ನಾನೇ ಹೆಚ್ಚು ಪ್ರಸಿದ್ಧಿ ಪಡೆದಿದ್ದು ಎಂದ ರಶೀದ್‌ ಖಾನ್‌….

ಮುಂಬೈ : ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆ ಗಳಿಸಿರುವ ರಶೀದ್ ಖಾನ್, ಅಪ್ಘನ್‌  ಪ್ರಧಾನಿಯ ಬಳಿಕ ತಾನೇ ಹೆಚ್ಚು ಪ್ರಸಿದ್ಧಿ ಪಡೆದಿರುವುದಾಗಿ ಹೇಳಿದ್ದಾರೆ.

ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಅತ್ಯುತ್ತಮ ಪ್ರದರ್ಶನ ನೀಡಿದ ರಶೀದ್, ಟೀಂ ಫೈನಲ್ ತಲುಪಲು ಕಾರಣರಾಗಿದ್ದರು. ಈ ವೇಳೆ ಸಚಿನ್ ತೆಂಡೂಲ್ಕರ್ ಸಹ ವಿಶ್ವದ ಉತ್ತಮ ಟಿ20 ಬೌಲರ್ ಎಂದು ಹೊಗಳಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು ಸಚಿನ್ ವಿಶ್ವದಲ್ಲೇ ಹೆಚ್ಚು ಅಭಿಮಾನಿಗಳನ್ನು ಪಡೆದ ಆಟಗಾರರು. ಅವರ ಟ್ವೀಟನ್ನು ಅಫ್ಘನ್ ನ ಎಲ್ಲರೂ ನೋಡಿರುತ್ತಾರೆ. ಸಚಿನ್ ರ ಹೊಗಳಿಕೆ ತನ್ನಂತಹ ಹಲವು ಯುವ ಆಟಗಾರರಿಗೆ ಹೆಚ್ಚು ಸ್ಪೂರ್ತಿ ಎಂದಿದ್ದಾರೆ.

ಈ ಬಾರಿಯ ಐಪಿಎಲ್ ನಲ್ಲಿ 21 ವಿಕೆಟ್ ಪಡೆದಿರುವ ಖಾನ್ ಟೂರ್ನಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ವಿಶೇಷವಾಗಿ ಟೂರ್ನಿಯಲ್ಲಿ ಧೋನಿ, ಎಬಿ ಡಿವಿಲಿಯರ್ಸ್, ವಿರಾಟ್ ಕೊಹ್ಲಿ ಅವರ ವಿಕೆಟ್ ಪಡೆದಿರುವುದು ಹೆಚ್ಚು ಹೆಮ್ಮೆ ಎನಿಸುತ್ತದೆ ಎಂದಿದ್ದಾರೆ.

ಮುಂದಿನ ಜೂನ್ ನಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಟೆಸ್ಟ್ ಪಂದ್ಯದ ಮೂಲಕ ಅಫ್ಘಾನ್ ತಂಡ ಮೊದಲ ಅಂತರಾಷ್ಟ್ರೀಯ ಟೆಸ್ಟ್ ಗೆ ಪಾದಾರ್ಪಣೆ ಮಾಡಲಿದೆ. ಈ ಪಂದ್ಯ ಅತ್ಯಂತ ಮಹತ್ವದಾಗಿದ್ದು, ಇಡೀ ದೇಶವೇ ಎದುರು ನೋಡುತ್ತಿದೆ. ಈ ಪಂದ್ಯಕ್ಕೆ ಆಯ್ಕೆ ಆಗಿರುವ ಎಲ್ಲರು ಲಕ್ಕಿ ಆಟಗಾರರಾಗಿದ್ದು, ಈ ಮೂಲಕ ಇತಿಹಾಸ ಬರೆಯಲಿದ್ದೇವೆ ಎಂದಿದ್ದಾರೆ.

One thought on “ಅಫ್ಘನ್‌ ಪ್ರಧಾನಿ ಬಳಿಕ ನಾನೇ ಹೆಚ್ಚು ಪ್ರಸಿದ್ಧಿ ಪಡೆದಿದ್ದು ಎಂದ ರಶೀದ್‌ ಖಾನ್‌….

Leave a Reply

Your email address will not be published.