ಮಹಿಳೆಯ ಬಳಿ ನನಗೆ ದೋಸೆ, ಇಡ್ಲಿ ಮಾಡ್ಕೊಡಿ ಎಂದು ಕೇಳಿದ ಮೋದಿ….!!

ದೆಹಲಿ : ಪ್ರಧಾನಿ ನರೇಂದ್ರ ಮೋದಿ ಉಜ್ವಲ್‌ ಭೀಮಾ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ್ದರು. ಇದೇ ವೇಳೆ ಮಾತನಾಡಿದ ಮೋದಿ,  ಬಡ ಮಹಿಳೆಯರಿಗೆಗಾಗಿ ಉಜ್ವಲ್‌ ಭೀಮಾ ಯೋಜನೆಯನ್ನು ಜಾರಿಗೆ ತಂದಿದ್ದು, ಕಳೆದ ನಾಲ್ಕು ವರ್ಷದಲ್ಲಿ 10 ಕೋಟಿ ಎಲ್‌ಪಿಜಿ ಕನೆಕ್ಷನ್‌ ನೀಡಲಾಗಿದೆ. ಈ ಯೋಜನೆಯ ಲಾಭ ಪಡೆದವರಲ್ಲಿ ಶೇ.45ರಷ್ಟು ಮಂದಿ ದಲಿತರು ಹಾಗೂ ಅಲ್ಪಸಂಖ್ಯಾತರೇ ಇದ್ದಾರೆ ಎಂದು ಮೋದಿ ಹೇಳಿದ್ದಾರೆ.

ಇನ್ನು ಆನ್‌ಲೈನ್‌ ಸಂವಾದದ ವೇಳೆ ತಮಿಳುನಾಡಿನ ಮಹಿಳೆಯೊಬ್ಬರೊಂದಿಗೆ ಮಾತನಾಡಿದ ಮೋದಿ, ನಗೆ ಚಟಾಕಿ ಹಾಕಿದ್ದಾರೆ. ನಿಮ್ಮ ಮನೆಗೆ ನಾನು ಬಂದಾಗ ನನಗೆ ಇಡ್ಲಿ, ದೋಸೆ ಮಾಡಿಕೊಡುತ್ತೀರಾ… ಎಂದು ಪ್ರಶ್ನಿಸಿದ್ದಾರೆ. ಗ್ಯಾಸ್‌ ಸಿಲಿಂಡರ್‌ ಬರುವುದಕ್ಕೂ ಮುನ್ನ ನಿಮ್ಮ ಮನೆಯಲ್ಲಿ ಇಡ್ಲಿ, ದೋಸೆ ಮಾಡುತ್ತಿದ್ದಿರಾ ಎಂದು ಮೋದಿ ಕೇಳಿದ್ದು, ಇದಕ್ಕೆ ಉತ್ತರಿಸಿದ ಮಹಿಳೆ ರುದ್ರಮ್ಮ ಮೊದಲು ಇಡ್ಲಿ, ದೋಸೆ ಮಾಡುವುದು ಸುಲಭವಾಗಿರಲಿಲ್ಲ. ಆದರೆ ಈಗ ಆರಾಮಾಗಿ ದೋಸೆ, ಇಡ್ಲಿ ಮಾಡುವುದಾಗಿ ಉತ್ತರಿಸಿದ್ದಾರೆ. ಹಾಗಾದ್ರೆ  ನಾನು ನಿಮ್ಮ ಮನೆಗೆ ಬಂದಾಗ ನನಗೆ ದೋಸೆ, ಇಡ್ಲಿ ಮಾಡಿಕೊಡಿ ಎಂದು ಮೋದಿ ಹಾಸ್ಯ ಮಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com