ಮೈತ್ರಿ ಮುರಿಯುವ ಸೂಚನೆ ನೀಡಿದ JDS ನಾಯಕ : ಬಿಜೆಪಿ ನುಡಿದಿದ್ದ ಭವಿಷ್ಯ ನಿಜವಾಗುತ್ತಾ….?

ಮಂಡ್ಯ : ಜೆಡಿಎಸ್‌-ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವಾರವಾಗುವುದರೊಳಗೆ ಬಿಜೆಪಿ ನುಡಿದಿದ್ದ ಭವಿಷ್ಯ ನಿಜವಾಗುವಂತೆ ಕಾಣುತ್ತಿದೆ.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನಿಂದಲೂ ಮುಖ್ಯಮಂತ್ರಿಗಳೇ ಹಣಕಾಸು ಖಾತೆಯನ್ನು ನೋಡಿಕೊಳ್ಳುವುದು ವಾಡಿಕೆ. ಆದರೆ ಕಾಂಗ್ರೆಸ್ ನಾಯಕರು ಹಣಕಾಸು ಖಾತೆ ವಿಚಾರದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರಲ್ಲದೆ ನಮ್ಮ ನಾಯಕ ಕುಮಾರಸ್ವಾಮಿ ಅವರನ್ನು ಗೊಂದಲಕ್ಕೆ ಸಿಲುಕಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ನಮಗೆ ಬೆಂಬಲ ನೀಡಲು ಕಾಂಗ್ರೆಸ್‍ನವರು ಮುಂದಾಗಿದ್ದರು. ಆದರೆ ಈಗ ಷರತ್ತುಗಳನ್ನು ಹಾಕಿ ಕುಮಾರಸ್ವಾಮಿ ಅವರನ್ನು ಮುಜುಗರಕ್ಕೆ ಗುರಿ ಮಾಡಿದ್ದಾರೆ. ಅನೇಕ ಆಲೋಚನೆಗಳ ಅನುಷ್ಠಾನಕ್ಕೆ ಮುಖ್ಯಮಂತ್ರಿಗಳೇ ಹಣಕಾಸು ಖಾತೆ ನಿಭಾಯಿಸುತ್ತಾರೆ. ಖಾತೆ ಹಂಚಿಕೆಯಲ್ಲಿ ಸಮಸ್ಯೆಯಾಗಿ ಮೈತ್ರಿ ಮುರಿದುಕೊಂಡು ಜೆಡಿಎಸ್ ಹೊರಗೆ ಬಂದರೂ ನಾವು ನಮ್ಮ ನಾಯಕರ ಜೊತೆ ಇರುತ್ತೇವೆ ಎಂದಿದ್ದಾರೆ.

ಸಾಲ ಮನ್ನಾ ವಿಚಾರದಲ್ಲಿ ಕುಮಾರಸ್ವಾಮಿ ಅವರು ಯಾವುದೇ ನಿರ್ಧಾರ ತೆಗೆದುಕೊಂಡರೂ ಜೆಡಿಎಸ್‍ನ ಎಲ್ಲಾ ಶಾಸಕರು ಅವರ ಜೊತೆ ಇರುವುದಾಗಿ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com