ಮಂಡ್ಯದ ಗಂಡಿಗೆ ಹುಟ್ಟುಹಬ್ಬದ ಸಂಭ್ರಮ : ಅಂಬಿ ನಿಮ್ಗೆ 66 ವರ್ಷ ವಯಸ್ಸಾಯ್ತು….

ಮಂಡ್ಯ : ಮಂಡ್ಯದ ಗಂಡು, ರೆಬೆಲ್‌ ಸ್ಟಾರ್‌ ಅಂಬರೀಶ್‌ 66ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ನಿನ್ನೆ ರಾತ್ರಿಯಿಂದಲೇ ಅಂಬಿ ಮನೆಯ ಮುಂದೆ ಜಮಾಯಿಸಿದ್ದು,  ಚಂದನವನದ ನೆಚ್ಚಿನ ನಟನಿಗೆ ಶುಭಾಷಯ ತಿಳಿಸಿದ್ದಾರೆ.

ಇದೇ ವೇಳೆ ಮಾತನಾಡಿದ ಅಂಬರೀಶ್, ಅಭಿಮಾನಿಗಳಿಂದಾಗಿ ನಾನು ಬೆಳೆದಿದ್ದೇನೆ. ಅವರ ಖುಷಿಯೇ ನನ್ನ ಖುಷಿ. 49 ವರ್, ಅವರನ್ನು ರಂಜಿಸಿದ್ದಕ್ಕೆ ನನ್ನ ಮೇಲೆ ಪ್ರೀತಿ ಇಟ್ಟಿದ್ದಾರೆ. ನನ್ನ ಮಗನನ್ನು ಈಗ  ಅವರಿಗೆ ಒಪ್ಪಿಸಿರುವುದಾಗಿ ಹೇಳಿದ್ದಾರೆ.

ಅಂಬರೀಶ್‌ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಟ ದರ್ಶನ್‌ ಎಲ್ಲರಿಗಿಂತ ಮೊದಲೇ ಕೇಕ್‌ ತಂದು ಅಂಬಿ ಕೈಯಿಂದ ಕತ್ತರಿಸಿ ಶುಭಾಷಯ ಕೋರಿದ್ದಾರೆ. ಮತ್ತೊಂದೆಡೆ ಪ್ರೀತಿಯ ಅಂಬಿ ಮಾಮನಿಗೆ ಕಿಚ್ಚ ಸುದೀಪ್‌ ಸಹ ವಿಶ್‌ ಮಾಡಿದ್ದಾರೆ.

Leave a Reply

Your email address will not be published.