ಬರೆದಿಟ್ಟುಕೊಳ್ಳಿ…ಇನ್ನು 100 ವರ್ಷವಾದ್ರೂ ಜೆಡಿಎಸ್‌ ಬಹುಮತದೊಂದಿಗೆ ಅಧಿಕಾರಕ್ಕೆ ಬರಲ್ಲ : ಶ್ರೀರಾಮುಲು

ಕೊಪ್ಪಳ : ಸೂರ್ಯ ಚಂಜ್ರರಿರುವವರೆಗೂ ಜೆಡಿಎಸ್‌ಗೆ ರಾಜ್ಯದಲ್ಲಿ  ಪೂರ್ಣ ಬಹುಮತ ಬರುವುದಿಲ್ಲ. ಅವರೆಂದಿಗೂ ಪೂರ್ಣಬಹುಂತದೊಂದಿಗೆ ಅಧಿಕಾರ ಹಿಡಿಯುವುದಿಲ್ಲ ಎಂದು ಸಂಸದ ಶ್ರೀರಾಮುಲು ಭವಿಷ್ಯ ನುಡಿದಿದ್ದಾರೆ.

ಪದವೀಧರರ ಕ್ಷೇತ್ರದ ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಕೊಪ್ಪಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು ಜೆಡಿಎಸ್‌ ವಿರುದ್ದ ಹರಿಹಾಯ್ದಿದ್ದಾರೆ.

ಇನ್ನೂ 100 ವರ್ಷವಾದರೂ  ಜೆಡಿಎಸ್‌ಗೆ ರಾಜ್ಯದಲ್ಲಿ ಪೂರ್ಣ ಬಹುಮತ ಸಿಗುವುದಿಲ್ಲ. ಇದನ್ನು ಬರೆದಿಟ್ಟುಕೊಳ್ಳಿ ಎಂದಿದ್ದಾರೆ. ಇನ್ನು ಸಿದ್ದರಾಮಯ್ಯ ಕುರಿತು ಮಾತನಾಡಿದ ಅವರು,   ನಮಗೆ ಅವರ ಬಗ್ಗೆ ಯಾವ ಸಾಫ್ಟ್‌ ಕಾರ್ನರೂ ಇಲ್ಲ. ಕಾಂಗ್ರೆಸ್ ಪಕ್ಷದಲ್ಲಾದ ಅನ್ಯಾಯದ ಬಗ್ಗೆ ಮಾತನಾಡುತ್ತಿದ್ದಾರೆ. ರೈತರಿಗಾದ ಅನ್ಯಾಯ ಖಂಡಿಸಿ ನಡೆದ ಬಂದ್‌ ಯಶಸ್ವಿಯಾಗಿದೆ. ಕುಮಾರಸ್ವಾಮಿ ಸಿಎಂ ಆದ ಬಳಿಕ ಕಾಂಗ್ರೆಸ್‌ನ ಬಾಲ ಬಡಿಯುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಕುಮಾರಸ್ವಾಮಿ ಸಾಲ ಮನ್ನಾ ಮಾಡದಿದ್ದರೆ ಖುರ್ಚಿ ಖಾಲಿ ಮಾಡಬೇಕು. ಸರ್ಕಾರ ಬಹಳ ದಿನ ಉಳಿಯೋದಿಲ್ಲ, ಮತ್ತೆ ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಾರೆ ಎಂದು ಶ್ರೀರಾಮುಲು ಆತ್ಮ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.