ಪಾಕಿಸ್ತಾನದಲ್ಲಿ ಬೇರೂರುತ್ತಿದ್ದಾರೆ ಹಿಂದೂಗಳು : ನೆರೆ ರಾಷ್ಟ್ರದಲ್ಲಿ ಗಣನೀಯ ಹೆಚ್ಚಳ ಕಂಡ ಹಿಂದೂ ಮತದಾರರು !

ಇಸ್ಲಾಮಾಬಾದ್‌ : ಮುಂದಿನ ತಿಂಗಳು ನಡೆಯಲಿರುವ ಪಾಕಿಸ್ತಾನದ ಚುನಾವಣೆಗೆ ಎಲ್ಲಾ ರೀತಿಯ ಸಿದ್ಧತೆ ನಡೆಯುತ್ತಿದ್ದು, ಪ್ರಮುಖ ರಾಷ್ಟ್ರೀಯ ಪಕ್ಷಗಳು ಮತದಾರರ ಓಲೈಕೆಯಲ್ಲಿಯಲ್ಲಿ ನಿರತವಾಗಿವೆ.

ಈ ನಡುವೆ ಕಳೆದ ಐದು ವರ್ಷಗಳಲ್ಲಿ ಪಾಕಿಸ್ತಾನದ ಹಿಂದೂ ಮತದಾರರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆಯೆಂದು ವರದಿಗಳು ತಿಳಿಸಿವೆ.

ಅಂಕಿ ಅಂಶಗಳ ಪ್ರಕಾರ 2013ರಲ್ಲಿ ಪಾಕಿಸ್ತಾನದ ಒಟ್ಟು ಮತದಾರರ ಸಂಖ್ಯೆ 8.61 ಕೋಟಿಯಿಂದ ಈಗ 10.5 ಕೋಟಿಗೆ ಏರಿಕೆ ಆಗಿದೆ. ಪಾಕಿಸ್ತಾನದ ಒಟ್ಟು ಜನಸಂಖ್ಯೆ 20 ಕೋಟಿ. ಇದೇ ವೇಳೆ ಮುಸ್ಲಿಮೇತರ ಅಲ್ಪಸಂಖ್ಯಾತರ ಒಟ್ಟು ಮತ ಪ್ರಮಾಣವೂ ಶೇಕಡಾ 30ರಷ್ಟು ಹೆಚ್ಚಾಗಿದೆ.

ಹಿಂದೂ ಮತದಾರರ ಸಂಖ್ಯೆ ಶೇಕಡಾ 26ರಷ್ಟು ಹೆಚ್ಚಾಗಿದೆ. ಅಲ್ಪಸಂಖ್ಯಾತರೆಂದು ಗುರುತಿಸಲ್ಪಡುವ ಮುಸ್ಲಿಮೇತರ ಮತಗಳು 2013ರಲ್ಲಿ 27 ಲಕ್ಷವಿದ್ದರೆ ಈಗ ಅದು 36 ಲಕ್ಷಕ್ಕೇರಿದೆ. ಇವರಲ್ಲಿ 17.7 ಲಕ್ಷ ಹಿಂದೂ ಮತದಾರರು ಎಂದು ತಿಳಿದುಬಂದಿದೆ.

Leave a Reply

Your email address will not be published.

Social Media Auto Publish Powered By : XYZScripts.com