ಮೈತ್ರಿ ಸರ್ಕಾರಕ್ಕೆ ಆಘಾತ : ಕಮಲದ ತೆಕ್ಕೆಗೆ ಜಾರಲು ಸಿದ್ಧರಾಗಿದ್ದಾರಂತೆ ಕೈ ಶಾಸಕರು !!

ಬೆಂಗಳೂರು : ಒಂದೆಡೆ ಸಂಪುಟ ರಚನೆ ಕುರಿತಂತೆ ಸಮ್ಮಿಶ್ರ ಸರಕಾರದಲ್ಲಿ ಹಗ್ಗಜಗ್ಗಾಟ ಮುಂದುವರಿದಿದ್ದರೆ, ಮತ್ತೊಂದೆಡೆ ರಾಜ್ಯ ಗುಪ್ತಚರ ಇಲಾಖೆಯು ಕೈ ಶಾಸಕರ ದಂಡು ಬಿಜೆಪಿ ಸೇರಲು ಮುಂದಾಗಿದೆ ಎಂದು ವರದಿ ಬಿಡುಗಡೆ ಮಾಡಿದೆ.

ಸಚಿವ ಸ್ಥಾನ ತಪ್ಪಿದರೆ ಬಂಡಾಯವೇಳುವ ಸಾಧ್ಯತೆಯಿದ್ದು, ಗುಪ್ತಚರ ಇಲಾಖೆ ವರದಿ ಕಾಂಗ್ರೆಸ್ ಹೈಕಮಾಂಡ್ ತಲೆನೋವುಂಟು ಮಾಡಿದೆ.

ಜೆಡಿಎಸ್‌ನ ಒಂದಿಬ್ಬರೂ ಶಾಸಕರೂ ಕೂಡ ಬಿಜೆಪಿ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ. ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್, ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ್, ಶಿವಾನಂದ ಪಾಟೀಲ್, ರಾಜಶೇಖರ್ ಪಾಟೀಲ್ ಹುಮ್ನಾಬಾದ್, ಬಿ.ಸಿ ಪಾಟೀಲ್, ಕಂಪ್ಲಿ ಶಾಸಕ ಗಣೇಶ್, ಆನಂದ ಸಿಂಗ್, ಪ್ರತಾಪ್ ಗೌಡ ಪಾಟೀಲ್ ಸೇರಿದಂತೆ ಕಾಂಗ್ರೆಸ್ ನ 11 ಶಾಸಕರ ಪಟ್ಟಿಯನ್ನು ಸಿಎಂಗೆ ಗುಪ್ತಚರ ಇಲಾಖೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಅವಕಾಶವಂಚಿತರು ಯಾವುದೇ ಗಳಿಗೆಯಲ್ಲಿ ಬೇಕಾದರೂ ಬಿಜೆಪಿ ನಾಯಕ ಯಡಿಯೂರಪ್ಪ ಅವರನ್ನು ಸಂಪರ್ಕಿಸಬಹುದು ಎಂದು ಗುಪ್ತಚರ ಇಲಾಖೆಯು ಹೇಳಿದೆ. ಗುಪ್ತಚರ ಇಲಾಖೆಯು ನೀಡಿದ ಈ ಎಚ್ಚರಿಕೆಯನ್ನು ಸಿಎಂ ಕುಮಾರಸ್ವಾಮಿ ಇದೀಗ ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com