ಕೊಪ್ಪಳದಲ್ಲಿ ಬಿಜೆಪಿ ನಾಯಕನ ವಿರುದ್ಧ ದಾಖಲಾಯ್ತು ಎಫ್‌ಐಆರ್‌…..ಕಾರಣವೇನು ?

ಬೆಂಗಳೂರು : ರೈತರ ಸಾಲ ಮನ್ನಾಗೆ ಆಗ್ರಹಿಸಿ ಬಿಜೆಪಿ ಕರೆ ನೀಡಿದ್ದ ಬಂದ್‌ ವೇಳೆ ಪೊಲೀಸರ ಕೊರಳ ಪಟ್ಟಿ ಹಿಡಿದಿದ್ದ ಪ್ರಕರಣ ಸಂಬಂಧ ಬಿಜೆಪಿ ಸಂಸದ ಸಂಗಣ್ಣ ಕರಡಿ, ಪುತ್ರ ಅಮರೇಶ್‌ ಕರಡಿ ಸೇರಿದಂತೆ 38 ಜನರ ವಿರುದ್ಧ  ಎಫ್ಐಆರ್‌ ದಾಖಲಾಗಿದೆ.

ಕೊಪ್ಪಳದಲ್ಲಿ ಬಿಜೆಪಿ ಪ್ರತಿಭಟನೆಯ ವೇಳೆ  ಒತ್ತಾಯಪೂರ್ವಕವಾಗಿ ಅಂಗಡಿಗಳನ್ನು ಬಂದ್‌ ಮಾಡಿಸಲಾಗಿತ್ತು. ಈ ವೇಳೆ ಮೈಕ್‌ ಅಳವಡಿಸಿದ್ದ  ಆಟೋವನ್ನು ಬಿಜೆಪಿ ಕಾರ್ಯಕರ್ತರು ವಶಕ್ಕೆ ಪಡೆದಿದ್ದರು. ಆ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಸಂಗಣ್ಣ ಕರಡಿ ಹಾಗೂ ಡಿವೈಎಸ್‌ಪಿ ಎಸ್‌.ಎಂ.ಸಂದಿಗವಾಡ ಅವರ ನಡುವೆ  ತೀವ್ರ  ವಾಗ್ವಾದ ನಡೆದಿತ್ತು. ಈ ವೇಳೆ ಸಂಗಣ್ಣ ಕರಡಿ ಪೊಲೀಸರ ಕೊರಳ ಪಟ್ಟಿ ಹಿಡಿದು ಎಳೆದಾಡಿದ್ದು, ಈ ದೃಶ್ಯ ಸೆರೆಯಾಗಿದೆ.

ಸಿಪಿಐ ರವಿ ಉಕ್ಕುಂದ ಅವರು ನೀಡಿರುವ ದೂರಿನಂತೆ ಕೊಪ್ಪಳ ನಗರ ಠಾಣೆಯಲ್ಲಿ  ಸಂಸದ ಕರಡಿ ಮತ್ತು 38 ಜನರ ವಿರುದ್ಧ ಸೆಕ್ಷನ್‌‌143,147,149 341,353,504 ರ ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published.