ಶ್ರೀಮಂತ ವರ್ಗದ ಕ್ರೈಸ್ತ ಯುವತಿಯನ್ನು ಮದುವೆಯಾಗಿದ್ದ ದಲಿತನ ಮರ್ಯಾದಾ ಹತ್ಯೆ…..?!

ಕೊಟ್ಟಾಯಂ : ಶ್ರೀಮಂತ ವರ್ಗದ ಯುವತಿಯನ್ನು ಮದುವೆಯಾಗಿದ್ದಕ್ಕೆ ದಲಿತ ಕ್ರೈಸ್ತ ಸಮುದಾಯದ ಯುವಕನನ್ನು  ಕೊಂದಿರುವ ಶಂಕೆ ವ್ಯಕ್ತವಾಗಿದೆ. ಮೃತನ ದೇಹ ಪತ್ತೆಯಾಗಿದ್ದು, ಇದು ಮರ್ಯಾದೆ ಹತ್ಯೆ ಎನ್ನಲಾಗಿದೆ.
ಯುವಕ ಕೆವಿನ್‌ ಪಿ ಜೋಸೆಫ್‌ 20 ವರ್ಷಯ ನಿನೂ ಚಾಕೋ ಎಂಬ ಶ್ರೀಮಂತ ಯುವತಿಯನ್ನು ಪ್ರೇಮ ವಿವಾಹವಾಗಿದ್ದು, ಮದುವೆಯ ಬಳಿಕ ನಾಪತ್ತೆಯಾಗಿದ್ದ.
ಪೋಷಕರು ನೀಡಿದ್ದ ದೂರಿನ ಆಧಾರದ ಮೇಲೆ  ಕೇರಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸಿದ್ದರು. ಈ ವೇಳೆ ಕೆವಿನ್‌ ಹಾಗೂ ಆತನ ಸಂಬಂಧಿ ಅನೀಶ್‌ ಎಂಬುವವನನ್ನು ಅಪಹರಣ ಮಾಡಿರುವ ವಿಚಾರ ತಿಳಿದಿದ್ದು, ಆತನ ಮೃತದೇಹ ಸಹ ಪತ್ತೆಯಾಗಿದೆ.
 ಇನ್ನು ತನ್ನ ಪತಿ ಕೆವಿನ್ ನನ್ನು ತಮ್ಮ ಸಹೋದರ ಶಾನು ಸೇರಿದಂತೆ 10 ಮಂದಿ ಅಪಹರಿಸಿದ್ದಾರೆ ಎಂದು ನಿನೂ ಪೊಲೀಸರಿಗೆ ದೂರು ನೀಡಿದ್ದಳು.
  ಮದುವೆ ನಂತರ ನವದಂಪತಿ ಅನೀಶ್ ಮನೆಯಲ್ಲಿ ವಾಸವಾಗಿದ್ದರು. ಭಾನುವಾರ ಬೆಳಗ್ಗೆ ಅನೀಸ್ ಮನೆಗೆ ನುಗ್ಗಿದ 10 ಮಂದಿಯ ತಂಡವೊಂದು ಕೆವಿನ್ ಮತ್ತು ಅನೀಶ್ ನನ್ನು ಅಪಹರಿಸಿತ್ತು. ನಂತರ ಅನೀಶ್ ಮೇಲೆ ತೀವ್ರ ಹಲ್ಲೆ ನಡೆಸಿ ಮಧ್ಯ ದಾರಿಯಲ್ಲೇ ಆತನನ್ನು ಬಿಟ್ಟು ಹೋಗಿದ್ದರು.

Leave a Reply

Your email address will not be published.