ದೇವಸ್ಥಾನದಲ್ಲಿ ಮೂತ್ರ ಮಾಡಿ, ಹುಂಡಿಯಲ್ಲಿ ಕಾಂಡೋಮ್ ಹಾಕಿದ ಯುವಕರು……ಆಮೇಲಾಗಿದ್ದೇನು ?

ಉಡುಪಿ : ಕೆಲ ಯುವಕರು ಉಡುಪಿಯ ಕಾಟಪ್ಪಾಡಿ ಜಿಲ್ಲೆಯ ಪೇಟೆಬೆಟ್ಟುವಿನ ಶ್ರೂ ಬಬ್ಬುಸ್ವಾಮಿ ದೇವಾಸ್ಥಾನದಲ್ಲಿ ಕಳೆದ ತಿಂಗಳು ದೇವಾಲಯದ ಮುಂದೆ ಇದ್ದ ಕಾಣಿಕೆ ಹುಂಡಿಯ ಮೇಲೆ ಮೂತ್ರ ಮಾಡಿ, ಆ ಹುಂಡಿಯ ಒಳಗಡೆ ಕಾಂಡೋಮ್​ ಪೊಟ್ಟಣಗಳನ್ನು ಹಾಕಿ ಪರಾರಿಯಾಗಿದ್ದರು.

ಆಡಳಿತ ಮಂಡಳಿ ಹುಂಡಿ ತೆರೆದಿದ್ದಾಗ ಕೃತ್ಯ ಬಯಲಾಗಿತ್ತು. ಆದರೆ ಈ ಕೆಲಸವನ್ನು ಯಾರು ಮಾಡಿದ್ದಾರೆ ಎಂದು ತಿಳಿಯದ ಆಡಳಿತ ಮಂಡಳಿ ಮತ್ತು ಭಕ್ತಿ ಸಮೂಹ ಈ ರೀತಿ ಮಾಡಿದವರಿಗೆ ತಕ್ಕ ಶಾಸ್ತಿಯನ್ನು ಮಾಡಬೇಕು ಎಂದು ದೇವರ ಮೊರೆ ಹೋಗಿದ್ದರು.

ಅಲ್ಲಿಗೆ ತಣ್ಣಗಾಗಿದ್ದ ಪ್ರಕರಣಕ್ಕೆ ಒಂದು ತಿಂಗಳ ಬಳಿಕ ಉತ್ತರ ಸಿಕ್ಕಿದೆ. ದೇವಾಲಯಕ್ಕೆ ಬಂದು ಅಪಚಾರವೆಸಗಿದ್ದ ಮುಸ್ಲಿಂ ಯುವಕರಿಗೆ ಆ ದೇವಾಲಯದಲ್ಲಿ ಇರುವ ಕೊರಗಜ್ಜ ತಕ್ಕ ಶಿಕ್ಷೆ ನೀಡಿದ್ದಾರಂತೆ.

ದೇವಾಲಯದ ಆವರಣದಲ್ಲಿ ಈ ರೀತಿ ಮಾಡಿದ್ದ ಮುಸ್ಲಿಂ ಯುವಕನ ಸೊಂಟದಿಂದ ಕೆಳಕ್ಕೆ ಯಾವುದೇ ಅಂಗಗಳು ಸ್ವಾಧೀನವೇ ಇಲ್ಲದೆ ಶಕ್ತಿ ಕಳೆದುಕೊಂಡಿವೆ. ಮನೆಯವರು ಯಾವುದೇ ಆಸ್ಪತ್ರೆ ಗಳಿಗೆ ತೋರಿಸಿದರೂ ಗುಣಮುಖರಾಗಿಲ್ಲ. ಕೊನೆಯ ಪ್ರಯತ್ನವಾಗಿ ಜ್ಯೋತಿಷ್ಯವನ್ನು ಕೇಳಿದ್ದಾರೆ. ಆಗ ಅವರು ಕೊರಗಜ್ಜನ ಅವಕೃಪೆಯಿಂದ ಹೀಗಾಗಿದ್ದು ಮಾಡಬಾರದ ತಪ್ಪೊಂದನ್ನು ಆ ಹುಡುಗ ಮಾಡಿದ್ದಾನೆ ಎಂದು ಹೇಳಿದ್ದಾರೆ.ಆಗ ಮನೆಗೆ ಬಂದ ಅವರು ಯುವಕನನ್ನು ವಿಚಾರಿಸಿದಾಗ ತಾವು ಮತ್ತು ತನ್ನ ಮತ್ತಿಬ್ಬರು ಸ್ನೇಹಿತರೊಂದಿಗೆ ಸೇರಿ ಈ ಅಪಚಾರ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ನಂತರ ಅವನನ್ನು ದೇವಾಲಯಕ್ಕೆ ಕರೆದುಕೊಂಡು ಬಂದು ಮಾಡಿದ್ದು ತಪ್ಪಾಯಿತು ಎಂದು ಹೇಳಿ ಬೇಡಿಕೊಂಡು ಕೆಲವು ಪೂಜೆಗಳನ್ನು ಮಾಡಿಸಿದ ನಂತರ ಆ ಯುವಕ ಗುಣಮುಖನಾಗಿದ್ದಾನೆ.

ಆದರೆ ಅವನ ಜೊತೆಯಲ್ಲಿ ಬಂದು ಈ ಕು ಕೃತ್ಯವೆಸಗಿದ್ದ ಒಬ್ಬನ ಮೂತ್ರಪಿಂಡ ತೊಂದರೆಯಿಂದ ಬಳಲುತ್ತಿದ್ದರೆ, ಮತ್ತೊಬ್ಬ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

Leave a Reply

Your email address will not be published.

Social Media Auto Publish Powered By : XYZScripts.com