ಕಾಫಿನಾಡಿನ ರೂಪದರ್ಶಿ ಜೊತೆ ಸಾಂಗವಾಗಿ ನೆರವೇರಿದ ರಾಜಾಹುಲಿ ಖ್ಯಾತಿಯ ಹರ್ಷ ನಿಶ್ಚಿತಾರ್ಥ…..

ಸ್ಯಾಂಡಲ್‌ವುಡ್‌ ನಟ, ರಾಜಾಹುಲಿ ಖ್ಯಾತಿಯ ಹರ್ಷ ಅವರ ನಿಶ್ಚಿತಾರ್ಥ ನಡೆದಿದೆ. ಚಿಕ್ಕಮಗಳೂರು ಮೂಲದ ಐಶ್ವರ್ಯಾ ಅವರ ಜೊತೆ ಹರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಹರ್ಷ ಅವರನ್ನು ಮದುವೆಯಾಗುತ್ತಿರುವ ಹುಡುಗಿ ಮಾಡೆಲ್ ಎಂದು ತಿಳಿದುಬಂದಿದೆ. ಹರ್ಷ, ಮೊಗ್ಗಿನ ಮನಸ್ಸು ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಬಳಿಕ ಅನೇಕ ಸಿನಿಮಾಗಳಲ್ಲಿ ನಟಿಸಿದ್ದ ಹರ್ಷ ರಾಜಾಹುಲಿ ಸಿನಿಮಾದಲ್ಲಿ ಗುರುತಿಸಿಕೊಳ್ಳುವಂತಹ ನಟನೆ ಮಾಡಿದ್ದರು.ಅಲ್ಲದೆ ಪುನೀತ್‌ ರಾಜ್‌ ಕುಮಾರ್‌ ಅವರ ಪವರ್ ಸ್ಟಾರ್‌ ಸಿನಿಮಾದಲ್ಲಿ ನಟಿಸಿದ್ದರು.

ಅಲ್ಲದೆ ಹರ್ಷ ನಾಯಕ ನಟನಾಗಿ ‘ವರ್ಧನ’, ‘ರಘುವೀರ್’, ‘ಗಜಪಡೆ’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com