ಯಜಮಾನ ‘ಡಿ ಬಾಸ್‌’ಗೆ ಅಪರೂಪದ ಉಡುಗೊರೆ ಕೊಟ್ಟ ಅಭಿಮಾನಿ…ಫುಲ್‌ ಖುಷ್‌ ಆದ್ರಂತೆ ದರ್ಶನ್‌

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ. ಅವರಿಗೆ ಅಭಿಮಾನಿಗಳ ದೊಡ್ಡ ಬಳಗವೇ ಇದೆ ಎಂಬುದು ಎಲ್ಲರಿಗೂ ಗೊತ್ತು. ಸಾಮಾನ್ಯವಾಗಿ ಸದಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ದರ್ಶನ್‌ ಈ  ವೀಕೆಂಡ್‌ ದಿನದಂದು ಮಂಗಳೂರಿಗೆ ತೆರಳಿದ್ದು, ತಡವಾಗಿ ತೆರಳಿದ್ದರೂ, ದರ್ಶನ್ ಅವರನ್ನು ನೋಡಲು ಸಾವಿರಾರು ಮಂದಿ ಕಾದು ಕುಳಿತಿದ್ದರು.

ಇದೇ ವೇಳೆ ಅಭಿಮಾನಿಯೊಬ್ಬರು ತಮ್ಮ ನೆಚ್ಚಿನ ನಟನಿಗೆ ಗಿಫ್ಟೊಂದನ್ನು ನೀಡಿದ್ದಾರೆ. ನಟ ದರ್ಶನ್‍ಗೆ ವ್ಯಂಗ್ಯ ಚಿತ್ರವಿರುವ ಒಂದು ಫೋಟೋವನ್ನು ಉಡುಗೊರೆಯಾಗಿ ನೀಡಿದ್ದಾರೆ.

ದರ್ಶನ್ ಈ ಹಿಂದೆ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮಕ್ಕಾಗಿ ಕರಾವಳಿಗೆ ಹೋಗಿದ್ದರು. ಮಂಗಳೂರಿಗರ ಪ್ರೀತಿಗೆ ದರ್ಶನ್ ಇದೀಗ ಮತ್ತೊಮ್ಮೆ ಇನ್ನೊಂದು ಕಾರ್ಯಕ್ರಮಕ್ಕೆ ಹೋಗಿದ್ದು, ಈ ಬಾರಿಯೂ ಅಭಿಮಾನಿಗಳು ಅಷ್ಟೇ ಉತ್ಸಾಹದಿಂದ ಅವರನ್ು ನೋಡಲುಮುಗಿಬಿದ್ದಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com