ಮಕ್ಕಳ ಕಳ್ಳರ ವದಂತಿ : ಕಲ್ಲಿನಿಂದ ಹೊಡೆದು ತೃತೀಯ ಲಿಂಗಿಯ ಹತ್ಯೆ ಮಾಡಿದ ಸಾರ್ವಜನಿಕರು

ಹೈದರಾಬಾದ್ : ಮಕ್ಕಳ ಕಳ್ಳರು ಬಂದಿದ್ದಾರೆಂಬ ವದಂತಿ ಕೇವಲ ಕರ್ನಾಟಕ ಮಾತ್ರವಲ್ಲ ನೆರೆ ತೆಲಂಗಾಣಕ್ಕೂ ಕಾಲಿಟ್ಟಿದ್ದು, ಇದಕ್ಕೆ ತೃತೀಯಲಿಂಗಿಯೊಬ್ಬರು ಬಲಿಯಾಗಿದ್ದಾರೆ.

ಮಕ್ಕಳನ್ನು ಅಪಹರಿಸಲು ಬಂದಿದ್ದಾರೆಂಬ ವದಂತಿ ಹಿನ್ನೆಲೆಯಲ್ಲಿ ಹೈದರಾಬಾದ್‌ನಲ್ಲಿ ಸಾರ್ವಜನಿಕರು ತೃತೀಯಲಿಂಗಿಗಳ ಮೇಲೆ ಕಲ್ಲುತೂರಾಟ ಮಾಡಿದ್ದು, ಓರ್ವ ತೃತೀಯ ಲಿಂಗಿ ಮೃತಪಟ್ಟಿದ್ದಾರೆ. ಇನ್ನು ಮೂವರಿಗೆ ಗಂಭೀರ ಗಾಯಗಳಾಗಿರುವುದಾಗಿ ತಿಳಿದುಬಂದಿದೆ.

ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ನಡೆಸುತ್ತಿರುವ ಪೊಲೀಸರು 25 ಮಂದಿಯನ್ನು ಬಂಧಿಸಿದ್ದಾರೆ.  ಇನ್ನು ಸುಳ್ಳುವದಂತಿ ಹಬ್ಬಿಸಿದ ಆರೋಪದ ಮೇರೆಗೆ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ರಂಜಾನ್ ್ಹಬ್ಬದ ಹಿನ್ನೆಲೆಯಲ್ಲಿ ಅನೇಕ  ಮಂದಿ ತೃತೀಯ ಲಿಂಗಿಗಳು ಭಿಕ್ಷೆ ಬೇಡುವ ಸಲುವಾಗಿ ಹೈದರಾಬಾದ್‌ಗೆ ಆಗಮಿಸಿದ್ದು, ಈ ವೇಳೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಅವರ ಮೇಲೆ ಸಾರ್ವಜನಿಕರು ಶಂಕಿಸಿ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com