ಎಚ್‌ಡಿಕೆ ಮುಖ್ಯಮಂತ್ರಿಯಾಗಿ ಐದು ವರ್ಷ ಪೂರೈಸಲ್ಲ ಎನ್ನುತ್ತಿದೆ ‘ಇತಿಹಾಸ’……ಯಾಕೆ ?

ದೇಶದ ಮಂದಿಯೆಲ್ಲ ಭಾರೀ ಕುತೂಹಲದಿಂದ ಕಾದಿದ್ದ ಕರ್ನಾಟಕ ಚುನಾವಣೆ ಮುಗಿದಿದ್ದ, ಈಗ ಸಾಲಮನ್ನಾ ವಿಚಾರವಾಗಿ ಕುಮಾರಸ್ವಾಮಿ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದು ಎಲ್ಲರ  ಕುತೂಹಲಕ್ಕೆ ಕಾರಣವಾಗಿದೆ.

ಚುನಾವಣೆಯಲ್ಲಿ ಹೆಚ್ಚು ಓಟು ಪಡೆದ ಕಾಂಗ್ರೆಸ್, ಹೆಚ್ಚು ಸೀಟು ಗೆದ್ದ ಬಿಜೆಪಿ ಎರಡನ್ನೂ ಬಿಟ್ಟು ಜೆಡಿಎಸ್‌ನ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಕುಮಾರಸ್ವಾಮಿ ಪ್ರಮಾಣವಚನ ಸ್ವೀಕಾರಕ್ಕೆ ಘಟಾನುಘಟಿ ರಾಜಕಾರಣಿಗಳು ಬಂದಿದ್ದು ಗೊತ್ತಿರುವ ಸಂಗತಿ. ಆದರೆ  ಸಿಎಂ ಆಗಿರುವ ಕುಮಾರಸ್ವಾಮಿ ಐದು ವರ್ಷಗಳ ತನಕ ಆ ಪದವಿಯಲ್ಲಿ ಇರುತ್ತಾರಾ? ಇಲ್ಲವಾ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಏಕೆ ಎಂಬ ಕಾರಣಕ್ಕೆ ಇಲ್ಲಿದೆ ಉತ್ತರ…

ಕರ್ನಾಟಕದ ವಿಧಾನಸೌಧದ ಮುಂದೆ ಪ್ರಮಾಣ ವಚನ ಸ್ವೀಕರಿಸಿದ ಯಾವೊಬ್ಬ ಮುಖ್ಯಮಂತ್ರಿಯೂ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿಲ್ಲ.  1993ರಲ್ಲಿ ಅಂದಿನ ಜನತಾದಳ ಮುಖಂಡ ರಾಮಕೃಷ್ಣ ಹೆಗಡೆ ಮೊದಲ ಸಲ ವಿಧಾನಸೌಧದ ಎದುರು ಪ್ರಮಾಣ ವಚನ ಸ್ವೀಕರಿಸಿ, ಮದ್ಯದ ಕಾಂಟ್ರಾಕ್ಟ್ ಆರೋಪಗಳಿಂದ ವರ್ಷದಲ್ಲೇ ಪದವಿ ಕಳೆದುಕೊಂಡರು.

ಅದಕ್ಕೂ ಮುನ್ನ 1990ರಲ್ಲಿ ಬಂಗಾರಪ್ಪ ಸಹ ವಿಧಾನಸೌಧ ಬಳಿ ಪ್ರಮಾಣ ವಚನ ಸ್ವೀಕರಿಸಿದ್ದರು. ಕಾವೇರಿ ಜಲ ವಿವಾದದ ಕಾರಣ ಎರಡು ವರ್ಷಗಳಲ್ಲೇ ಪದವಿ ಕಳೆದುಕೊಂಡರು. 2006ರಲ್ಲಿ ಕುಮಾರಸ್ವಾಮಿ ಸಹ ಪ್ರಮಾಣ ವಚನ ಸ್ವೀಕಾರ ಮಾಡಿ 20 ತಿಂಗಳಲ್ಲೇ ಪದವಿ ಕಳೆದುಕೊಂದರು. 2008ರಲ್ಲಿ ಯಡಿಯೂರಪ್ಪನವರಿಗೂ ಇದೇ ಅನುಭವವಾಗಿತ್ತು. ಭ್ರಷ್ಟಾಚಾರ ಆರೋಪಗಳಿಂದ ಮೂರು ವರ್ಷಕ್ಕೆ ಪದವಿಗೆ ರಾಜೀನಾಮೆ ನೀಡಬೇಕಾಯಿತು. ಮತ್ತೆ ಈಗ ಕುಮಾರಸ್ವಾಮಿ ಸಹ ವಿಧಾನಸೌಧದ ಮುಂದೆ ಪ್ರಮಾಣ ಸ್ವೀಕರಿಸಿದ್ದು ಅಧಿಕಾರ ಕಳೆದುಕೊಳ್ಳುತ್ತಾರಾ ಇಲ್ಲವಾ ಎಂಬುದನ್ನು ಕಾದುನೋಡಬೇಕಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com