ಮೂರನೇ ಬಾರಿಗೆ IPL ಟ್ರೋಫಿ ಎತ್ತಿ ಹಿಡಿದ CSK : ಧೋನಿ ಕಿರೀಟಕ್ಕೆ ಮತ್ತೊಂದು ಗರಿ

ಮುಂಬೈನ ವಾಂಖೇಡೆ ಮೈದಾನದಲ್ಲಿ ರವಿವಾರ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಸನ್ ರೈಸರ್ಸ್ ತಂಡವನ್ನು 8 ವಿಕೆಟ್ ಗಳಿಂದ ಮಣಿಸಿದ ಚೆನ್ನೈ ಸೂಪರ್ ಕಿಂಗ್ಸ್ ಮೂರನೇ ಬಾರಿಗೆ ಟ್ರೋಫಿ ಎತ್ತಿ ಹಿಡಿದಿದೆ. ಈ ಮೂಲಕ ಮಹೇಂದ್ರ ಸಿಂಗ್ ಧೋನಿ ಯಶಸ್ಸಿನ ಕಿರೀಟಕ್ಕೆ ಮತ್ತೊಂದು ಗರಿ ಸೇರಿಕೊಂಡಿದೆ.

Image result for csk srh final IPL 2018

ಧೋನಿ ನಾಯಕನಾಗಿ ಯಶಸ್ವಿಯಾಗಿದ್ದು ಮಾತ್ರವಲ್ಲದೇ, ಈ ಬಾರಿ ತಮ್ಮ ಬ್ಯಾಟ್ ಮೂಲಕವೂ ಟೀಕಾಕಾರರಿಗೆ ಉತ್ತರಿಸಿದ್ದರು. ಟೂರ್ನಿಯಲ್ಲಿ 15 ಇನ್ನಿಂಗ್ಸ್ ಆಡಿದ ಧೋನಿ, 75.83 ಸರಾಸರಿ ಹಾಗೂ 150.66 ಸ್ಟ್ರೈಕ್ ರೇಟ್ ನೊಂದಿಗೆ 455 ರನ್ ಬಾರಿಸಿದ್ದರು. ಫಿಕ್ಸಿಂಗ್ ಪ್ರಕರಣದಲ್ಲಿ 2 ವರ್ಷ ಐಪಿಎಲ್ ಟೂರ್ನಿಯಿಂದ ನಿಷೇಧಕ್ಕೊಳಗಾಗಿದ್ದ ಚೆನ್ನೈ ಈ ಬಾರಿ ಆಡುವ ಅವಕಾಶ ಪಡೆದುಕೊಂಡಿತ್ತು.

Image result for csk srh final IPL 2018

2010 ಮೊದಲ ಸಲ ಗೆದ್ದಿದ್ದ ಐಪಿಎಲ್ ಚಾಂಪಿಯನ್ ಎನಿಸಿಕೊಂಡಿದ್ದ ಚೆನ್ನೈ ಮರುವರ್ಷವೇ ಅಂದರೆ 2011ರಲ್ಲಿ ಮತ್ತೆ ಐಪಿಎಲ್ ಟ್ರೋಫಿಯನ್ನು ಜಯಿಸಿತ್ತು. ಈಗ 7 ವರ್ಷಗಳ ಬಳಿಕ 2018 ರಲ್ಲಿ ಚೆನ್ನೈ ಮೂರನೇ ಸಲ ಚಾಂಪಿಯನ್ ಆಗಿ ಹೊರಹೊಮ್ಮಿದೆ. 2ನೇ ಸಲ ಚಾಂಪಿಯನ್ ಆಗುವ ಸನ್ ರೈಸರ್ಸ್ ಕನಸಿಗೆ ಅಬ್ಬರದ ಚೆನ್ನೈ ಆರಂಭಿಕ ಬ್ಯಾಟ್ಸಮನ್ ಶೇನ್ ವಾಟ್ಸನ್ ತಣ್ಣೀರೆರಚಿದರು. ಅಜೇಯ ಶತಕ ಬಾರಿಸಿದ ಶೇನ್ ವಾಟ್ಸನ್ ಚೆನ್ನೈ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com