ದೆಹಲಿಯಲ್ಲಿ ಕಾಂಗ್ರೆಸ್ ನಾಯಕರ ಮುಂದೆ ಮುಲಾಜಿಲ್ಲದೆ ಯೂಟರ್ನ್ ಹೊಡೆದ ಸಿಎಂ ಕುಮಾರಸ್ವಾಮಿ…!!
ದೆಹಲಿ : ನಿನ್ನೆಯಷ್ಟೇ ನಾನು ರಾಜ್ಯದ ಜನರ ಮುಲಾಜಿನಲ್ಲಿಲ್ಲ. ಕಾಂಗ್ರೆಸ್ನ ಮುಲಾಜಿನಲ್ಲಿದ್ದೇನೆ ಎಂದಿದ್ದ ಸಿಎಂ ಕುಮಾರಸ್ವಾಮಿ ಇಂದು ಉಲ್ಟಾ ಹೊಡೆದಿದ್ದು, ಮತ್ತೆ ನಾನು ಕಾಂಗ್ರೆಸ್ನ ಮುಲಾಜಿನಲ್ಲಿಲ್ಲ, ಜನರ ಮುಲಾಜಿನಲ್ಲಿದ್ದೇನೆ ಎಂದಿದ್ದಾರೆ.
ಇಂದು ದೆಹಲಿಯಲ್ಲಿ ಸಚಿವ ಸಂಪುಟ ಸಭೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಕುಮಾರಸ್ವಾಮಿ, ತಮ್ಮದೇ ಹೇಳಿಕೆಯ ವಿರುದ್ಧ ಯೂಟರ್ನ್ ಹೊಡೆದಿದ್ದಾರೆ. ನಾನು ಕಾಂಗ್ರೆಸ್ನ ಮುಲಾಜಿನ ಸಿಎಂ ಅಲ್ಲ. ನಾನೇನಿದ್ದರೂ ಕರ್ನಾಟಕ ಜನರ ಮುಲಾಜಿನ ಸಿಎಂ ಎಂದಿದ್ದಾರೆ.