ಎಚ್‌ಡಿಕೆ ಮೀಟ್ಸ್‌ ಮೋದಿ : ನಾಡಿನ ಜನತೆಗೆ ನಾನೆಂದೂ ಮೋಸ ಮಾಡಲ್ಲವೆಂದು ಅಭಯವಿತ್ತ ಕುಮಾರಸ್ವಾಮಿ

ದೆಹಲಿ : 
ದೆಹಲಿಯ ಲೋಕಕಲ್ಯಾಣ ಮಾರ್ಗದಲ್ಲಿರುವ ನಿವಾಸದಲ್ಲಿ ಮೋದಿಯವರನ್ನು ಭೇಟಿ ಮಾಡಿದ ಸಿಎಂ, ಮಹದಾಯಿ ವಿವಾದ ಬಗೆಹರಿಸುವ ಸಲುವಾಗಿ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯುವಂತೆ ಮನವಿ ಮಾಡಿದ್ದಾರೆನ್ನಲಾಗಿದೆ.
 ಇದೇ ವೇಳೆ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ಕುಮಾರಸ್ವಾಮಿ ಅವರನ್ನು ಅಭಿನಂದಿಸಿದ ಮೋದಿ, ಕೇಂದ್ರ ಸರಕಾರದಿಂದ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.  ಪ್ರಧಾನಿ ಭೇಟಿ ಬಳಿಕ ಮಾತನಾಡಿದ ಅವರು, ಪ್ರಧಾನಿ ಅವರು ಆಡಳಿತದ ಬಗ್ಗೆ ಹಲವು ಸಲಹೆಗಳನ್ನು ನೀಡಿದ್ದಾರೆ. ಸಲಹೆ ನೀಡಿದ ಪ್ರಧಾನಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದ್ದಾರೆ.

 ರೈತರ ಸಾಲಮನ್ನಾ ಬಗ್ಗೆ ಎಲ್ಲವನ್ನೂ ಸಿದ್ದಪಡಿಸಿದ್ದೇನೆ. ಬುಧವಾರ ಬೆಂಗಳೂರಿನಲ್ಲಿ ಎಲ್ಲವನ್ನೂ ಬಹಿರಂಗ ಪಡಿಸುತ್ತೇನೆ ಎಂದಿದ್ದಾರೆ. ಸಾಲಮನ್ನಾ ವಿಚಾರದಲ್ಲಿ ಪ್ರತಿಪಕ್ಷ ನಾಯಕ ಯಡಿಯೂರಪ್ಪ ಭಾರಿ ವೇಗದಲ್ಲಿ ಮುನ್ನುಗ್ಗುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಸಾಲಮನ್ನಾಕ್ಕೆ ಸಮಯ ಬೇಕಾಗುತ್ತದೆ. ಉಸಿರಾಡುವುದಕ್ಕೂ ಸಮಯಬೇಕಾಗುತ್ತದೆ.  ನಾಡಿನ ಜನರಿಗೆ ತಾವು ಅನ್ಯಾಯ ಮಾಡುವವನಲ್ಲ. ಈ ಬಗ್ಗೆ ಬೇರೆಯವರಿಂದ ಹೇಳಿಸಿಕೊಳ್ಳಬೇಕಿಲ್ಲ ಎಂದು ಬಿಎಸ್‌ವೈ ವಿರುದ್ಧ ಹರಿಹಾಯ್ದರು.

One thought on “ಎಚ್‌ಡಿಕೆ ಮೀಟ್ಸ್‌ ಮೋದಿ : ನಾಡಿನ ಜನತೆಗೆ ನಾನೆಂದೂ ಮೋಸ ಮಾಡಲ್ಲವೆಂದು ಅಭಯವಿತ್ತ ಕುಮಾರಸ್ವಾಮಿ

  • May 28, 2018 at 11:50 PM
    Permalink

    U could have blessed with good packages provided u hd supported BJP

    Reply

Leave a Reply

Your email address will not be published.