ಕುಮಾರಸ್ವಾಮಿಯ ಜುಟ್ಟು ಹಿಡಿದಾದ್ರೂ ಸಾಲಮನ್ನಾ ಮಾಡುವಂತೆ ಕೇಳಿ : C.T ರವಿ

ಚಿಕ್ಕಮಗಳೂರು : ಸಿಎಂ ಕುಮಾರಸ್ವಾಮಿ ವಿರುದ್ದ ಬಿಜೆಪಿ ನಾಯಕ ಸಿ.ಟಿ ರವಿ ವಾಗ್ದಾಳಿ ನಡೆಸಿದ್ದಾರೆ.

ಸಾಲಮನ್ನಾ ಮಾಡುವಂತೆ ಕರೆ ನೀಡಿದ್ದ ಬಂದ್‌ ವೇಳೆ ಮಾತನಾಡಿದ ರವಿ,  ನಾನು ಕಾಂಗ್ರೆಸ್‌ ಮುಲಾಜಿನಲ್ಲಿದಿದೇನೆ, ಜನರ ಮುಲಾಜಿನಲ್ಲಿಲ್ಲ ಎನ್ನುವ ಕುಮಾರಸ್ವಾಮಿ ಖರ್ಚು ಮಾಡುತ್ತಿರುವ ಹಣ, ಜೆಡಿಎಸ್‌ನದ್ದೂ ಅಲ್ಲ, ಕಾಂಗ್ರೆಸ್‌ನದ್ದೂ ಅಲ್ಲ. ಅದು ರೈತರ ಹಣ. ಅದನ್ನು ಮೊದಲು ಮನ್ನಾ ಮಾಡಲಿ. ಆಮೇಲೆ ಬೆರೆ ಮಾತಾಡಲಿ ಎಂದು ಕಿಡಿ ಕಾರಿದ್ದಾರೆ.

ಕುಮಾರಸ್ವಾಮಿ ರೈತರಿಗೆ ಕೊಟ್ಟ ಮಾತನ್ನು ತಪ್ಪಿದ್ದಾರೆ. ಒಂದು ವಾರದಲ್ಲಿ ಸಿಎಂ ಸಾಲಮನ್ನಾ ಮಾಡದಿದ್ದರೆ, ರೈತರೆಲ್ಲರೂ  ವಿಧಾನಸೌಧಕ್ಕೆ ಮುತ್ತಿಗೆ ಹಾಕಿ, ಕುತ್ತಿಗೆ ಪಟ್ಟಿ ಹಿಡಿದು , ಜುಟ್ಟು ಹಿಡಿದಾದರೂ  ಸಾಲಮನ್ನಾ ಮಾಡುವಂತೆ ಮಾಡಿ ಎಂದು ಕರೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com