ಕಾಂಗ್ರೆಸ್‌ನ ಟ್ರಬಲ್‌ ಶೂಟರ್‌ ಶಿವಕುಮಾರ್‌ಗೇ ಎದುರಾಗಿದೆ ಟ್ರಬಲ್‌….ಸೋಲೊಪ್ಪಿಕೊಳ್ತಾರಾ ಡಿಕೆಶಿ..?

ಬೆಂಗಳೂರು : ಕಾಂಗ್ರೆಸ್-ಜೆಡಿಎಸ್‌ ಮೈತ್ರಿ ಸರ್ಕಾರ ರಚನೆ ಮಾಡುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದ ಕಾಂಗ್ರೆಸ್‌ ಟ್ರಬಲ್‌ ಶೂಟರ್‌ ಎಂದೇ ಹೆಸರು ಪಡೆದಿರುವ ಡಿ.ಕೆ ಶಿವಕುಮಾರ್‌ ಅವರಿಗೇ ಟ್ರಬಲ್‌ ಶುರುವಾಗಿದೆ.

ಇತ್ತೀಚೆಗಷ್ಟೇ ಕಾಂಗ್ರೆಸ್‌ನಲ್ಲಿ ಎಲ್ಲರನ್ನು ಒಗ್ಗೂಡಿಸಿ ಪಕ್ಷ ರಚನೆಗೆ ಸಹಾಯ ಮಾಡಲು ನಾನು ಬೇಕು ಅಧಿಕಾರ ಮಾತ್ರ ಇನ್ನೊಬ್ಬರಿಗೆ ಎಂದು ಅಸಮಾಧಾನ ಹೊರಹಾಕಿದ್ದ ಬೆನ್ನಲ್ಲೇ ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಒಲಿಯುತ್ತದೆ ಎಂಬ ಮಾತು ಕೇಳಿಬಂದಿತ್ತು. ಆದರೆ ಡಿಕೆಶಿ ಅವರ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪಕ್ಷದ ಹಿರಿಯ ನಾಯಕರೇ ತಣ್ಣೀರೆರಚಿದ್ದಾರೆ.

ಪಕ್ಷದ ಶಾಸಕರನ್ನು ಬಿಜೆಪಿ ತೆಕ್ಕೆಗೆ ಬೀಳಲು ಬಿಡದಂತೆ ಮಾಡಿದ್ದ ಡಿಕೆಶಿ ಈ ಕಾರಣದಿಂದಲೇ ಡಿಸಿಎಂ ಪಟ್ಟಕ್ಕೆ ಒತ್ತಡ ಹೇರಿದ್ದರು. ಇಲ್ಲದಿದ್ದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವಂತೆ ಬೇಡಿಕೆ ಇಟ್ಟಿದ್ದರು. ಆದರೆ ಶಿವಕುಮಾರ್‌ ಪಕ್ಷದ ಅಧ್ಯಕ್ಷರಾದರೆ ತಮ್ಮನ್ನೆಲ್ಲ ಕಡೆಗಣಿಸುತ್ತಾರೆ. ಪಕ್ಷವನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾರೆ ಎನ್ನುವುದು ಕಾಂಗ್ರೆಸ್‌ನ ಹಿರಿಯರ ಆತಂಕವಾಗಿದೆ. ಹಾಗಾಗಿ ಎಚ್‌.ಡಿ. ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ಸಲಹೆ ಪಡೆದು ಡಿಕೆಶಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬಹುದು. ಜಾತಿ ಮತ್ತು ಪ್ರಾದೇಶಿಕ ಪ್ರಾತಿನಿಧ್ಯದಡಿ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಬೇರೆ ಮುಖಂಡರಿಗೆ ನೀಡಬೇಕು ಎಂಬ ಸಲಹೆಯನ್ನು ಹೈಕಮಾಂಡ್‌ಗೆ ಕೊಟ್ಟಿದ್ದಾರೆ ಎಂದು ಖಾಸಗಿ ಮೂಲಗಳು ತಿಳಿಸಿವೆ.

Leave a Reply

Your email address will not be published.

Social Media Auto Publish Powered By : XYZScripts.com