ಟೆಲಿಕಾಂ ಕ್ಷೇತ್ರಕ್ಕೂ ಪತಂಜಲಿ ಎಂಟ್ರಿ : ಬಿಡುಗಡೆಯಾಯ್ತು “ಸ್ವದೇಶಿ ಸಮೃದ್ಧ್‌” ಸಿಮ್‌ ಕಾರ್ಡ್‌

ಹರಿದ್ವಾರ : ಪತಂಜಲಿ ಸಂಸ್ಥೆಯ ಮೂಲಕ ಮಾರುಕಟ್ಟೆಗೆ ಎಂಟ್ರಿ ಕೊಟ್ಟು ಸ್ವದೇಶಿ ಉತ್ಪನ್ನಗಳನ್ನು ಜನ ಕೊಳ್ಳುವಂತೆ ಮಾಡಿದ್ದ ಯೋಗಗುರು ಬಾಬಾ ರಾಂದೇವ್‌ ಈಗ ಟೆಲಿಕಾಂ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ.  ಪತಂಜಲಿ ಸಂಸ್ಥೆ ಬಿಎಸ್‌ಎನ್‌ಎಲ್‌ ಜೊತೆ ಒಪ್ಪಂದ ಮಾಡಿಕೊಂಡಿದ್ದು,  ಸ್ವದೇಶಿ ಸಮೃದ್ಧ್‌ ಹೆಸರಿನ ಸಿಮ್‌ ಕಾರ್ಡ್‌ಗಳನ್ನು ಪರಿಚಯಿಸಿದೆ.
ಹರಿದ್ವಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಮ್‌ದೇವ್‌ ಈ ಸಿಮ್‌ಕಾರ್ಡ್‌ಗಳನ್ನು ಬಿಡುಗಡೆ ಮಾಡಿದ್ದಾರೆ. ಪೂರ್ಣ ಪ್ರಮಾಣದಲ್ಲಿ ಸಿಮ್‌ ಲಾಂಚ್‌ ಆದ ಬಳಿಕ  ಗ್ರಾಹಕರು ಪತಂಜಲಿ ಉತ್ಪನ್ನಗಳ ಮೇಲೆ ಶೇ.10ರಷ್ಟು ವಿನಾಯಿತಿ ದೊರೆಯಲಿದೆ ಎಂದು ತಿಳಿದುಬಂದಿದೆ.
ಈ ಸಿಮ್‌ನ ಗ್ರಾಹಕರು  144ರೂ ರೀಚಾರ್ಜ್ ಮಾಡಿಸಿದರೆ ದೇಶಾದ್ಯಂತ ಉಚಿತ ಕರೆ, 2 ಜಿಬಿ ಡೇಟಾ, ದಿನಕ್ಕೆ 100 ಎಸ್‌ಎಂಎಸ್‌ ನ ಲಾಭ ಪಡೆಯಬಹುದು. ಈ ಸಿಮ್‌ ಗ್ರಾಹಕರಿಗೆ ಆರೋಗ್ಯ ಹಾಗೂ ಅಪಘಾತ ವಿಮೆ ಸಹ ದೊರೆಯಲಿದೆ.

 

Leave a Reply

Your email address will not be published.

Social Media Auto Publish Powered By : XYZScripts.com