ಯಡಿಯೂರಪ್ಪ ಆಯ್ತು….ಈಗ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ ಶೋಭಾ ಕರಂದ್ಲಾಜೆ !

ಉಡುಪಿ : ಚುನಾವಣೆಗೂ ಮುನ್ನ ಸಿದ್ದರಾಮಯ್ಯ ವಿರುದ್ಧ  ವಾಗ್ದಾಳಿ ನಡೆಸುತ್ತಿದ್ದ ಬಿಜೆಪಿ ನಾಯಕರು ಇತ್ತೀಚೆಗೆ  ಸ್ವಲ್ಪ ತಣ್ಣಗಾಗುತ್ತಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಪರ ಯಡಿಯೂರಪ್ಪ ಅನುಕಂಪ ತೋರಿಸಿದ್ದರು. ಈಗ ಸಂಸದೆ ಶೋಭಾ ಕರಂದ್ಲಾಜೆ ಸಹ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದಾರೆ.

ಕುರುಬರ ಮತಕ್ಕೆ ಸಿದ್ದರಾಮಯ್ಯ ಬೇಕಿತ್ತು. ಆದರೆ ಈಗ ಸಿದ್ದರಾಮಯ್ಯ ಜೆಡಿಎಸ್ ಗೂ ಬೇಡ, ಕಾಂಗ್ರೆಸ್ ಹೈಕಮಾಂಡಿಗೆ ಬೇಡವಾಗಿದ್ದಾರೆ. ಕಾಂಗ್ರೆಸ್ ಗೆ ದುಡ್ಡು ಕೊಡುವ ಮಂತ್ರಿಗಳು ಬೇಕಾಗಿದ್ದಾರೆ. ಸಿದ್ದರಾಮಯ್ಯ ಈಗ ಅವರಿಗೆಲ್ಲ ಲೆಕ್ಕಕ್ಕಿಲ್ಲ ಎಂದಿದ್ದಾರೆ.

ಜೊತೆಗೆ ಕಾಂಗ್ರೆಸ್ 78 ಸೀಟು ಪಡೆಯೋದಕ್ಕೆ ಸಿದ್ದರಾಮಯ್ಯ ಕಾರಣ. ಚುನಾವಣೆಯ ಸಂದರ್ಭದಲ್ಲಿ ಸೋನಿಯಾ, ರಾಹುಲ್ ಸಿದ್ದರಾಮಯ್ಯನವರನ್ನು ತಲೆಮೇಲೆ ಹೊತ್ತುಕೊಂಡು ತಿರುಗಿದ್ದರು. ಕಾಂಗ್ರೆಸ್‍ನದ್ದು ಯೂಸ್ ಆಂಡ್ ಥ್ರೋ ಮನಸ್ಥಿತಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಜೆಡಿಎಸ್- ಕಾಂಗ್ರೆಸ್ ಸರ್ಕಾರಕ್ಕೆ ಎರಡೆರಡು ಹೈಕಮಾಂಡ್. ಒಂದು ಹೈಕಮಾಂಡ್ ಪದ್ಮನಾಭ ನಗರದಲ್ಲಿ ಇನ್ನೊಂದು ಹೈಕಮಾಂಡ್ ದೆಹಲಿಯಲ್ಲಿದೆ ಎಂದು ವ್ಯಂಗ್ಯಮಾಡಿದ್ದಾರೆ.

Leave a Reply

Your email address will not be published.