ಹನುಮಂತ ವಿಶ್ವದ ಮೊದಲ ಆದಿವಾಸಿ ವ್ಯಕ್ತಿ ಎಂದ ರಾಜಸ್ಥಾನದ ಬಿಜೆಪಿ ಶಾಸಕ !!!

ಜೈಪುರ : ಭಗವಾನ್‌ ಹನುಮಂತ ವಿಶ್ವದ  ಮೊದಲ  ಆದಿವಾಸಿ ಎಂದು ರಾಜಸ್ಥಾನದ ಬಿಜೆಪಿ ಶಾಸಕ ಗ್ಯಾನ್‌ ದೇವ್‌ ಅಹುಜಾ ಹೇಳಿದ್ದಾರೆ.

ಹನುಮಾನ್  ಆದಿವಾಸಿಗಳ ಸೇನೆ ರಚನೆ ಮಾಡಿದ್ದರು. ಶ್ರೀರಾಮ ಈ ಆದಿವಾಸಿಗಳಿಗೆ  ತರಬೇತಿ ನೀಡಿದ್ದರು. ಆದ್ದರಿಂದ ಹನುಮಂತನನ್ನು ಆದಿವಾಸಿ ಜನ ಪೂಜಿಸುತ್ತಾರೆ. ಹನುಮಂತನೇ ವಿಶ್ವದ ಮೊದಲ ಆದಿವಾಸಿ. ಅಂತಹ ಹನುಮಂತನಿಗೆ ಏಪ್ರಿಲ್‌ 2ರಂದು ನಡೆದ ಬಂದ್‌ ವೇಳೆ ಅವಮಾನ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು, ಬಿಜೆಪಿ ಸಂಸದ ಕಿರೋಡಿ ಲಾಲ್ ಮೀನಾ ಬುಡಕಟ್ಟು ಜನಾಂಗದ ವ್ಯಕ್ತಿಯಾಗಿ, ಹನುಮಂತನ ವಿರುದ್ಧ ಅಗೌರವ ತೋರಿದ್ದಾರೆ. ಹೀಗಾಗಿ, ತಾನು ಅವರ ಜತೆ ಮಾತನಾಡಿದ್ದೇನೆ. ಬುಡಕಟ್ಟು ಜನಾಂಗದ ಮೊದಲ ದೇವರು ಹಾಗೂ ಹಿಂದೂ ದೇವರು ಹನುಮಾನ್ ಜೀ. ಆದರೂ, ಬಿಜೆಪಿ ಸಂಸದ ಯಾಕೆ ಅಗೌರವ ತೋರಿದ್ದಾರೆ ಎಂದು ನನಗೆ ಗೊತ್ತಿಲ್ಲ ಎಂದಿದ್ದಾರೆ.

ಅಹುಜಾ ಈ ಹಿಂದೆ  ಸಹ ಹಲವು ಬಾರಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಜೆಎನ್‌ಯು ಕ್ಯಾಂಪಸ್‌ನಲ್ಲಿ ಪ್ರತಿದಿನ 3 ಸಾವಿರ ಕಾಂಡೋಮ್‌ಗಳು ಹಾಗೂ 2 ಸಾವಿರ ಮದ್ಯದ ಬಾಟಲಿಗಳು ಸಿಗುತ್ತವೆ ಎಂದಿದ್ದರು. ಅಲ್ಲದೆ, ಗೋ ಹತ್ಯೆ ಹಾಗೂ ಕಳ್ಳ ಸಾಗಣೆ ಮಾಡುವವರನ್ನು ಅದೇ ರೀತಿ ಹತ್ಯೆ ಮಾಡಬಹುದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com