2019ರ ಲೋಕಸಭಾ ಚುನಾವಣೆಯಲ್ಲಿ ಆರ್‌ಜೆಡಿಯಿಂದ ಸ್ಪರ್ಧಿಸ್ತಾರಂತೆ ಐಶ್ವರ್ಯಾ ರೈ…..!!

ಪಾಟ್ನಾ : ಮುಂಬರುವ ಲೋಕಸಭಾ ಚುನಾವಣೆಗೆ ಎಲ್ಲಾ ಪಕ್ಷಗಳು ಸೇರಿಕೊಂಡು ಮೋದಿ ಸರ್ಕಾರವನ್ನು ಸೋಲಿಸಲೇಬೆಕೆಂಬ ಹಠ ತೊಟ್ಟಿದ್ದು, ಈಗಿನಿಂದಲೇ ಚುನಾವಣೆಗೆ ಸಿದ್ಧತೆ ನಡೆಸುತ್ತಿವೆ. ಈ ಮಧ್ಯೆ ಆರ್‌ಜೆಡಿಯಿಂದ ಲಾಲೂ ಪ್ರಸಾದ್‌ ಯಾದವ್‌ ಸೊಸೆ ಐಶ್ವರ್ಯಾ ರೈ ಸ್ಪರ್ಧೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಆದರೆ ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಅಧಿಕೃತ ಮಾಹಿತಿ ಹೊರಬೀಳುವುದಕ್ಕೂಮುನ್ನವೇ ಆರ್‌ಜೆಡಿ ವಿರುದ್ಧ ಜೆಡಿಯು ವಾಗ್ದಾಳಿ ನಡೆಸಿದ್ದು, ಆರ್‌ಜೆಡಿ ಕಾರ್ಯಕರ್ತರು ಕೇವಲ ಡ್ರಮ್‌ ಬಾರಿಸುವುದಕ್ಕಷ್ಟೇ  ಸೀಮಿತವೇ ಹೊರತು ಚುನಾವಣೆ ಎದುರಿಸಲು ಅಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.
ಇದೇ ಮೇ 12ರಂದು ಲಾಲೂ ಪುತ್ರ ತೇಜ್‌ ಪ್ರತಾಪ್ ಜೊತೆ ಐಶ್ವರ್ಯಾ  ರೈ ವಿವಾಹವಾಗಿತ್ತು. ಈಗ ಐಶ್ವರ್ಯಾ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು  ವರದಿ ಮಾಡಿವೆ.

Leave a Reply

Your email address will not be published.

Social Media Auto Publish Powered By : XYZScripts.com