6 ತಿಂಗಳ ಗರ್ಭಿಣಿಯನ್ನೂ ಬಿಡಲಿಲ್ಲ ಕಾಮುಕರು : ಸ್ನೇಹಿತರೊಂದಿಗೆ ಸೇರಿಕೊಂಡು ಅತ್ಯಾಚಾರವೆಸಗಿದ ಆಟೋ ಚಾಲಕ !

ಚಂಡೀಗಢ : ಮನುಷ್ಯನ ಮೃಗೀಯ ವರ್ತನೆ ಮಿತಿಮೀರಿದೆ.  ಮಾನವೀಯತೆಯನ್ನೇ ಮರೆತ ಕಾಮುಕರು ಗರ್ಭಿಣಿಯೊಬ್ಬರ ಮೇಲೆ ಅತ್ಯಾಚಾರವೆಸಗಿದ ದಾರುಣ ಘಟನೆ ಹರಿಯಾಣದಲ್ಲಿ ಬೆಳಕಿಗೆ ಬಂದಿದೆ.

ಹರಿಯಾಣದ ಮನೇಸರ್‌ ಪ್ರದೇಶದಲ್ಲಿ ಮೇ 21ರಂದು ಮಹಿಳೆ ತನ್ನ ಪತಿಯೊಂದಿಗೆ ಬೈಕಿನಲ್ಲಿ ವೈದ್ಯಕೀಯ ಪರೀಕ್ಷೆಗೆ ಬಂದಿದ್ದರು. ಪರೀಕ್ಷೆ ಮುಗಿದ ಬಳಿಕ ಮಹಿಳೆ ತನಗೆ ಬೈಕಿನಲ್ಲಿ ಕೂರಲು ಸಾಧ್ಯ ವಿಲ್ಲ ಎಂದ ಕಾರಣದಿಂದಾಗಿ ಆಕೆಯ ಪತಿ ಆಕೆಯನ್ನು ಆಟೋದಲ್ಲಿ ಕಳಿಸಿಕೊಟ್ಟಿದ್ದಾರೆ. ಬಾಯಾರಿಕೆ ಆಗಿದ್ದರಿಂದ ಆಟೋ ಚಾಲಕನ ಬಳಿ ನೀರು ಕೇಳಿ ಕುಡಿದಿದ್ದಾಳೆ. ಈ ವೇಳೆ ಆಕೆಗೆ ಪ್ರಜ್ಞೆ ತಪ್ಪಿದ್ದು, ಆಟೋ ಚಾಲಕ ಹಾಗೂ ಆತನ ಸಹಚರರು ಸೇರಿಕೊಂಡು ಅತ್ಯಾಚಾರ ಎಸಗಿದ್ದಾರೆ.

ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ವೈದ್ಯಕೀಯ ಪರೀಕ್ಷೇಯ ನಂತರ ಭ್ರೂಣ ಆರೋಗ್ಯವಾಗಿದೆ ಎಂದು ತಿಳಿದು ಬಂದಿದೆ.

One thought on “6 ತಿಂಗಳ ಗರ್ಭಿಣಿಯನ್ನೂ ಬಿಡಲಿಲ್ಲ ಕಾಮುಕರು : ಸ್ನೇಹಿತರೊಂದಿಗೆ ಸೇರಿಕೊಂಡು ಅತ್ಯಾಚಾರವೆಸಗಿದ ಆಟೋ ಚಾಲಕ !

Leave a Reply

Your email address will not be published.