IPL : ರಾಶಿದ್ ಆಲ್ರೌಂಡ್ ಆಟಕ್ಕೆ ಸಚಿನ್, ದ್ರಾವಿಡ್ ಮೆಚ್ಚುಗೆ : ದಿಗ್ಗಜರು ಹೇಳಿದ್ದೇನು..?

ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ಶುಕ್ರವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಕೆಕೆಆರ್ ತಂಡವನ್ನು ಮಣಿಸಿದ ಸನ್ ರೈಸರ್ಸ್ ಫೈನಲ್ ಗೆ ಅಡಿಯಿಟ್ಟಿದೆ. ಈ ಪಂದ್ಯದಲ್ಲಿ SRH ತಂಡದ ಲೆಗ್ ಸ್ಪಿನ್ನರ್ ರಾಶಿದ್ ಖಾನ್ ಆಲ್ರೌಂಡ್ ಪ್ರದರ್ಶನ ತೋರಿ ಗೆಲುವಿಗೆ ಕಾರಣರಾಗಿದ್ದಾರೆ. ಮಿಂಚಿನ ಬ್ಯಾಟಿಂಗ್ ನಡೆಸಿದ ರಾಶಿದ್, ಕೇವಲ 10 ಎಸೆತಗಳಲ್ಲಿ 2 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್ ಗಳ ನೆರವಿನಿಂದ 34 ರನ್ ಬಾರಿಸಿದರು.

ಅಫಘಾನಿಸ್ತಾನದ ಲೆಗ್ ಸ್ಪಿನ್ನರ್ ರಾಶಿದ್ ಖಾನ್ ಪ್ರದರ್ಶನದ ಕುರಿತು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಾಗೂ ರಾಹುಲ್ ದ್ರಾವಿಡ್, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟ್ವೀಟ್ ಮಾಡಿರುವ ಸಚಿನ್, ‘ ರಾಶಿದ್ ಖಾನ್ ಒಬ್ಬ ಒಳ್ಳೆಯ ಸ್ಪಿನ್ನರ್ ಎಂದು ನನಗೆ ಮುಂಚೆಯಿಂದಲೂ ಅನಿಸಿತ್ತು. ಟಿ-20 ಮಾದರಿಯ ಕ್ರಿಕೆಟ್ ನಲ್ಲಿ ರಾಶಿದ್ ಖಾನ್ ವಿಶ್ವದ ಬೆಸ್ಟ್ ಬೌಲರ್ ಆಗಿದ್ದಾರೆ ಎಂಬುದನ್ನು ಹೇಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ, ರಾಶಿದ್, ಉತ್ತಮ ಬ್ಯಾಟಿಂಗ್ ಕೌಶಲ್ಯವನ್ನೂ ಸಹ ಹೊಂದಿದ್ದಾರೆ, ಗ್ರೇಟ್ ಗಾಯ್ ‘ ಎಂದು ಬರೆದುಕೊಂಡಿದ್ದಾರೆ.

ಟ್ವೀಟ್ ಮಾಡಿರುವ ರಾಹುಲ್ ದ್ರಾವಿಡ್ ‘ ರಾಶಿದ್ ಖಾನ್ ನಿಸ್ಸಂಶಯವಾಗಿ ವಿಶ್ವದ ಬೆಸ್ಟ್ ಬೌಲರ್, ಟಿ20 ಯಲ್ಲಿ ಆತನನ್ನು ಯಾರೂ ಮೀರಿಸಲಾರರು. ಅಫಘಾನಿಸ್ತಾನದಿಂದ ಹೊರ ಹೊಮ್ಮಿದ ಅಸಾಮಾನ್ಯ ಪ್ರತಿಭೆ ರಾಶಿದ್ ‘ ಎಂದಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com