ಶಾಸಕರಿಗೆ ಹುಚ್ಚುನಾಯಿಗೆ ಹೊಡೆಯುವಂತೆ ಹೊಡೆಯಿರಿ : ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕ !
ಪಿರಿಯಾ ಪಟ್ಟಣ : ಶಾಸಕ ದಬ್ಬಾಳಿಕೆ ನಡೆಸಿದರೆ ಹುಚ್ಚು ನಾಯಿಗೆ ಹೊಡೆದಂತೆ ಹೊಡೆಯಿರಿ. ನಿಮಗೆ ನಾನು ಸಹಕಾರ ನೀಡುತ್ತೇನೆ ಎಂದು ಪಿರಿಯಾಪಟ್ಟಣದ ಸೋತ ಅಭ್ಯರ್ಥಿ ಕೆ.ವೆಂಕಟೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ಪಿರಿಯಾಪಟ್ಟಣ ಮಾತನಾಡಿದ ಅವರು, ನಾವಾಗಿ ಹೋಗಿ ಗಲಾಟೆ ಮಾಡೋದು ಬೇಡ. ಅವರಾಗಿ ಬಂದರೆ ಹುಚ್ಚು ನಾಯಿಗೆ ಹೊಡೆಯುವ ರೀತಿ ಹೊಡೆಯಿರಿ ಎಂದು ಕಾಂಗ್ರೆಸ್ ಪಕ್ಷದ ಸೋಲಿನ ಆತ್ಮಾವಲೋಕನ ಸಭೆಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕೆ.ಮಹದೇವು ಪಿರಿಯಾಪಟ್ಟಣದಿಂದ ನೂತ ಶಾಸಕರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಅವರ ವಿರುದ್ಧ ಪರೋಕ್ಷವಾಗಿ ಹೇಳಿಕೆ ನೀಡಿರುವ ವೆಂಕಟೇಶ್, ಫೇಕ್ ಅಡ್ರೆಸ್ ಮೂಲಕ ರಾಜಕಾರಣ ಶುರು ಮಾಡಿದ್ದು ಅವ್ರು. ಇಂತವರಿಂದ ಏನೂ ಒಳ್ಳೆಯದ್ದನ್ನು ನೀರಿಕ್ಷೆ ಮಾಡ್ತೀರಾ.?
ನೀವೆಲ್ಲರೂ ಸಂಘಟಿತರಾಗಿರಿ, ಏನೇ ಬಂದರೂ ನಾನು ನಿಮ್ಮ ಜೊತೆ ಇರ್ತೇನೆ. ಅವರದ್ದೇ ಸರ್ಕಾರ, ಆದರೆ ನಮ್ಮ ಪಾಲಿನ ಮೇಲಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿಗೆ ಎಚ್ಚರಿಕೆ ನೀಡಿದ್ದಾರೆ.
ಆದಷ್ಟು ಬೇಗ ಚುನಾವಣೆ ಬರುತ್ತದೆ ಅಂತ ಎಲ್ಲರೂ ಹೇಳುತ್ತಿದ್ದಾರೆ. ಆದರೆ ಸದ್ಯದಲ್ಲೇ ಚುನಾವಣೆ ಎದುರಿಸುವ ಶಕ್ತಿ ನಮಗಿಲ್ಲ. ನನ್ನ ಜೊತೆಯಲ್ಲಿ ಇದ್ದವರೇ ಬೆನ್ನಿಗೆ ಚೂರಿ ಹಾಕಿದ್ರು. ಸರ್ಕಾರದಿಂದ ಏನು ಆಗಬೇಕು ಎಂದು ಕೇಳಿ ನಾನು ಮಾಡಿಸುತ್ತೇನೆ ಎಂದಿದ್ದಾರೆ.