ಇವಿಎಂ ಬಗ್ಗೆ ನನಗೆ ಈಗಲೂ ಸಂಶಯವಿದೆ, ಆದರೆ ಪುರಾವೆ ಇಲ್ಲ ಅಂತ ಸುಮ್ಮನಿದ್ದೇನೆ : U.T ಖಾದರ್‌

ಮಂಗಳೂರು : ವಿಶ್ವಾಸಮತದ ಗೆಲುವು ಸಂವಿಧಾನದ ಗೆಲುವು. ಸಚಿವ ಸ್ಥಾನ ನೀಡುವುದು ಹೈ ಕಮಾಂಡ್ ಗೆ ಬಿಟ್ಟ ವಿಚಾರ. ಪಕ್ಷ ಯಾವ ತೀರ್ಮಾನ ಕೈಗೊಂಡರೂ ಅದಕ್ಕೆ ನಾನು ಬದ್ದನಾಗಿರುತ್ತೇನೆ ಎಂದು ಮಾಜಿ ಸಚಿವ ಯು.ಟಿ ಖಾದರ್ ಹೇಳಿಕೆ  ನೀಡಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವಿಎಂ ಯಂತ್ರದ ಬಗ್ಗೆ ಸಂಶಯ ಇದೆ. ಆದರೆ ಈ ಬಗ್ಗೆ ಯಾವುದೇ ದಾಖಲೆ ಇಲ್ಲ.  ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಈ ಸಂಶಯವನ್ನು ಚುನಾವಣಾ ಆಯೋಗ ಬಗೆಹರಿಸಬೇಕು ಎಂದಿದ್ದಾರೆ.

ಇನ್ನು ಸಾಲ ಮನ್ನಾ ಮಾಡದಿದ್ದರೆ ರಾಜ್ಯ ಬಂದ್ ಗೆ ಬಿ.ಎಸ್.ವೈ ಕರೆ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ಸಚಿವ ಸಂಪುಟ ರಚನೆಯಾಗಿಲ್ಲ ಇಂತಹಾ ಸಂದರ್ಭಗಳಲ್ಲಿ ಬಂದ್ ಕರೆ ಕೊಟ್ಟರೆ ಹೇಗೆ, ಪೆಟ್ರೋಲ್ ಬೆಲೆ ಏರಿಕೆಯಾದರೂ ಯಾಕೆ ಪ್ರತಿಭಟನೆ ಮಾಡಲ್ಲ ಎಂದು ಪ್ರಶ್ನಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com