ಕುಮಾರನ ಪಟ್ಟಾಭಿಷೇಕಕ್ಕೆ ಬಾರದ ರಾಧಿಕಾ ಕುಮಾರಸ್ವಾಮಿ : ಕಾರಣ ಇಲ್ಲಿದೆ….!!

ಬಿಜೆಪಿಯ ರಾಜಕೀಯ ಲೆಕ್ಕಾಚಾರಗಳನ್ನೆಲ್ಲ ತಲೆಕೆಳಗೆ ಮಾಡಿ ಕೊನೆಗೂ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಾಗಿದೆ. ಕುಮಾರಸ್ವಾಮಿಯವರು ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಪ್ರಮಾಣವಚನದ ದಿನ ಇಡೀ ದೇವೇಗೌಡರ ಕುಟುಂಬ ಹಾಜರಾಗಿದ್ದಲ್ಲದೆ, ಅನೇಕ ರಾಜ್ಯಗಳಿಂದ ಗಣ್ಯರು ಆಗಮಿಸಿದ್ದು ಗೊತ್ತೇ ಇದೆ.

ಇಂತಹ ಸಂತೋಷದ ಸಮಾರಂಭಕ್ಕೆ ಕುಮಾರಸ್ವಾಮಿ ಅವರ ಎರಡನೇ ಪತ್ನಿ ರಾಧಿಕಾ ಕುಮಾರಸ್ವಾಮಿ ಅವರು ಮಾತ್ರ ಬಂದಿರಲಿಲ್ಲ. ಕಾರ್ಯಕ್ರಮಕ್ಕೆ ರಾಧಿಕ ಯಾಕೆ ಬಂದಿರಲಿಲ್ಲ ಎಂಬುದಕ್ಕೆ ಕಾರಣವನ್ನೂ ತಿಳಿಸಿದ್ದಾರೆ. ಮಾಧ್ಯಮಗಳು ಈ ಬಗ್ಗೆ ರಾಧಿಕಾ ಅವರಿಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ನಾನು ಕಾಂಟ್ರ್ಯಾಕ್ಟ್ ಎಂಬ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದ ಕಾರಣ ಕಾರ್ಯಕ್ರಮಕ್ಕೆ ಹೋಗಲು ಸಾಧ್ಯವಾಗಿಲ್ಲ ಎಂದಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.

ಜೊತೆಗೆ ಕುಮಾರಸ್ವಾಮಿಯವರ ಮೇಲೆ ನಾಡಿನ ಜನರ ಆಶಿರ್ವಾದವಿದೆ. ನಾನು ರಾಜಕೀಯಕ್ಕೆ ಬರುವುದಿಲ್ಲ. ನನಗೆ ಸಿನಿಮಾ ರಂಗವೇ ಸಾಕು ಎಂದಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com