ಆರು ತಿಂಗಳ ಕಂದಮ್ಮನನ್ನೂ ಬಿಡದ ದುಷ್ಕರ್ಮಿಗಳು : ಕಾಲು ಕಟ್ಟಿಹಾಕಿ ತಾಯಿ ಮಗುವಿನ ಬರ್ಬರ ಹತ್ಯೆ…

ಕಲಬುರ್ಗಿ :ತಾಯಿ ಮತ್ತು ಮಗುವನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕಲಬುರ್ಗಿ ಜಿಲ್ಲೆ ಚಿತ್ತಾಪುರ ಪಟ್ಟಣದಲ್ಲಿ ನಡೆದಿದೆ.

ಬಿಹಾರ ಮೂಲದ ಕಾರ್ಮಿಕನ ಪತ್ನಿ ಹಾಗೂ ಆು ತಿಂಗಳ ಮಗುವನ್ನು ಬರ್ಬರವಾಗಿ ಹತ್ಯೆಗೈಯಲಾಗಿದೆ. ಚಿತ್ತಾಪುರ ಪಟ್ಟಣದ ಬಸ್ ನಿಲ್ದಾಣದ ಹಿಂಭಾಗದಲ್ಲಿ ಘಟನೆ ನಡೆದಿದೆ. ನಿಶಾ ಅಲಿಯಾಸ್ ಪಿಂಕಿ ಮತ್ತು ಆರು ತಿಂಗಳ ರಿಶಿ ಅಲಿಯಾಸ್ ಬಾಬು ಮೃತ ದುರ್ದೈವಿಗಳು.

ಬಿಹಾರ ಮೂಲದ ಪಾರಿತೋಷ ಜೇಸ್ವಾಲ್ ಎಂಬಾತನ ಪತ್ನಿ ಮತ್ತು ಮಗು ಕೊಲೆಯಾದವರು ಎಂದು ತಿಳಿದುಬಂದಿದೆ. ಓರಿಯಂಟಲ್ ಸಿಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಜೆಸ್ವಾಲ್, ಬೆಳಿಗ್ಗೆ ಎಂದಿನಂತೆ ಕೆಲಸಕ್ಕೆ ಹೋಗಿದ್ದ. ಮನೆಗೆ ಕೀಲಿ ಹಾಕಲಾಗಿದ್ದು, ಕೂಡಲೇ ಬರುವಂತೆ ಪಕ್ಕದ ಮನೆಯವರು ಕರೆ ಮಾಡಿದ ನಂತರ ಬಂದು ಕೀಲಿ ಒಡೆದು ಒಳ ಹೊಕ್ಕಾಗ ಕೊಲೆಯಾಗಿರುವ ಅಂಶ ಬೆಳಕಿಗೆ ಬಂದಿದೆ. ಪತಿಯೇ ತಾಯಿ ಮತ್ತು ಮಗುವಿನ ಕೊಲೆ ಮಾಡಿ, ಕೀಲಿ ಹಾಕಿ ಕಾರ್ಖಾನೆಗೆ ಹೋಗಿರಬಹುದೆಂದು ಶಂಕಿಸಲಾಗಿದೆ. ಪತಿ ಜೇಸ್ವಾಲ್ ನನ್ನು ಪೊಲೀಸರು ವಿಚಾರಣೆಗೆ ಗುರಿಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಚಿತ್ತಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com