ಮುಸ್ಲಿಂ ಯುವಕನನ್ನು ಉದ್ರಿಕ್ತರಿಂದ ರಕ್ಷಿಸಿ ಹೀರೋ ಆದ ಪೊಲೀಸ್‌ ಆಫೀಸರ್‌…ವಿಡಿಯೋ ವೈರಲ್‌

ಡೆಹ್ರಾಡೂನ್‌ : ಉತ್ತರಾಖಂಡ್‌ನ ಪೊಲೀಸ್ ಅಧಿಕಾರಿಯೊಬ್ಬರು ಈಗ ಸೋಶಿಯಲ್‌ ಮೀಡಿಯಾದಲ್ಲಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕಳೆದ ಮಂಗಳವಾರ ರಾಮನಗರ ಜಿಲ್ಲೆಯ ದೇವಾಲಯ ಸಮೀಪ ಉದ್ರಿಕ್ತ ಗುಂಪೊಂದು ಮುಸ್ಲಿಂ ಯುವಕನ ಮೇಲೆ ಹಲ್ಲೆ ನಡೆಸಲು ಮುಂದಾಗಿತ್ತು. ಈ ವೇಳೆ ಸಿಕ್ಖ್ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಆತನನ್ನು ಪಾರು ಮಾಡಿದ್ದು, ಈ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ.
ರಾಮನಗರದ ಸಮೀಪವಿರುವ ಗಿರಿಜಾ ದೇವಿ ದೇವಸ್ಥಾನದ ಬಳಿ ಹಿಂದೂ ಹುಡುಗಿಯೊಡನೆ ಮುಸ್ಲಿಂ ಯುವಕನೊಬ್ಬ ಅಸಭ್ಯ ಭಂಗಿಯಲ್ಲಿ ಇದ್ದ ಎಂದು ಒಂದಷ್ಟು ಮಂದಿ ಮುಸ್ಲಿಂ ಯುವಕನನ್ನು ಥಳಿಸಲು ಮುಂದಾಗಿತ್ತು. ಆಗ ಸ್ಥಳಕ್ಕೆ ಆಗಮಿಸಿದ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಗಗನ್‌ದೀಪ್‌ ಸಿಂಗ್‌ ಜನರ ಗುಂಪಿನಿಂದ ಆ ಯುವಕನನ್ನು ಪಾರು ಮಾಡಿದ್ದಾರೆ.
ಯುವತಿ ಹಾಗೂ ಮುಸ್ಲಿಂ ಯುವಕ ಭೇಟಿಯಾಗುವುದಕ್ಕಾಗಿ ಗಿರಿಜಾ ದೇವಿ ದೇವಸ್ಥಾನದ ಬಳಿ ಆಗಮಿಸಿದ್ದಾಗ ಅವರಿಗೆ ಬುದ್ದಿ ಕಲಿಸಬೇಕು ಎಂದು ಮೊದಲೇ ನಿರ್ಧರಿಸಿದ್ದ ಮಂದಿ ಯುವಕ ಹಾಗೂ ಆಕೆಯ ಪ್ರೇಯಸಿಯನ್ನು ಹಿಂಬಾಲಿಸಿತ್ತು. ಬಳಿಕ ಆ ಜೋಡಿಯನ್ನು ಸುತ್ತುವರಿದು ಹಲ್ಲೆಗೆ ಮುಂದಾಗಿತ್ತು. ಈ ಸುದ್ದಿ  ಗಗನ್‌ದೀಪ್‌ ಅವರಿಗೆ ತಿಳಿದಿದ್ದು, ಕೂಡಲೆ ಅಲ್ಲಿಗೆ ಧಾವಿಸಿ ಯುವ ಜೋಡಿಯನ್ನು ರಕ್ಷಿಸಿದ್ದಾರೆ.
 ಬಳಿಕ ಇಬ್ಬರನ್ನೂ ಠಾಣೆಗೆ ಕರೆದೊಯ್ದು ಪೋಷಕರಿಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published.

Social Media Auto Publish Powered By : XYZScripts.com