ಫಿಕ್ಸ್ ಆಯ್ತು ರಣ್‍ವೀರ್-ದೀಪಿಕಾ ಮದುವೆ ಡೇಟ್ : ನವೆಂಬರ್ ನಲ್ಲಿ ಮುಹೂರ್ತ ನಿಗದಿ..?

ಬಾಲಿವುಡ್ ನಟ ರಣವೀರ್ ಸಿಂಗ್ ಹಾಗೂ ನಟಿ ದೀಪಿಕಾ ಪಡುಕೋಣೆ ಇದೇ ವರ್ಷಾಂತ್ಯದ ವೇಳೆದೆ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೆಲ ದಿನಗಳಿಂದ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದೀಗ ಈ ಎಲ್ಲ ಊಹಾಪೋಹಗಳಿಗೆ, ಗಾಳಿಸುದ್ದಿಗಳಿಗೆ ತೆರೆ ಬಿದ್ದಿದೆ ಎಂದೇ ಹೇಳಬಹುದು.

Image result for ranveer deepika

ರಣವೀರ್ – ದೀಪಿಕಾ ಮದುವೆ 2018ರ ಡಿಸೆಂಬರ್ ನಲ್ಲಿ ನಡೆಯಲಿದೆ ಎಂಬ ಸುದ್ದಿ ಕೇಳಿ ಬಂದಿತ್ತು. ಆದರೆ ಇತ್ತೀಚಿನ ವರದಿಯ ಪ್ರಕಾರ ಹಿಂದಿ ಚಿತ್ರರಂಗದ ಈ ಸ್ಟಾರ್ ಜೋಡಿ ಬರುವ ನವೆಂಬರ್ 19 ಕ್ಕೆ ವಿವಾಹ ಬಂಧನಕ್ಕೆ ಒಳಗಾಗಲಿದ್ದಾರಂತೆ. ಹಲವು ದಿನಗಳಿಂದ ಪ್ರೇಮಿಗಳಾಗಿ ಸುತ್ತಾಡುತ್ತಿರುವ ರಣವೀರ್-ದೀಪಿಕಾ ವಿವಾಹ ಮುಂಬೈನಲ್ಲಿಯೇ ನಡೆಯಲಿದೆಯಂತೆ.

Image result for ranveer deepika

ಇನ್ನೊಂದು ಮೂಲಗಳ ಪ್ರಕಾರ ರಣವೀರ್ ಹಾಗೂ ದೀಪಿಕಾ ಇದೇ ಜುಲೈನಲ್ಲಿಯೇ ಮದುವೆಯಾಗಲು ನಿರ್ಧರಿಸಿದ್ದರಂತೆ. ಆದರೆ ದೀಪಿಕಾ, ರಣ್ವೀರ್ ಇಬ್ಬರೂ, ಕೆಲವು ಸಿನೆಮಾ ಪ್ರೊಜೆಕ್ಟ್ ಗಳಲ್ಲಿ ತೊಡಗಿಸಿಕೊಂಡಿರುವ ಕಾರಣ ಸಮಯದ ಅಭಾವದಿಂದ ಮದುವೆಯನ್ನು ನವೆಂಬರ್ ಗೆ ಮುಂದೂಡಿದ್ದಾರಂತೆ.

Leave a Reply

Your email address will not be published.

Social Media Auto Publish Powered By : XYZScripts.com