IPL : ಫೈನಲ್‍ಗೆ ಲಗ್ಗೆಯಿಟ್ಟ ಸನ್‍ರೈಸರ್ಸ್ : ರಾಶಿದ್ ಖಾನ್ ಆಲ್ರೌಂಡ್ ಆಟ : KKR ಕನಸು ಭಗ್ನ

ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಶುಕ್ರವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 14 ರನ್ ಅಂತರದಿಂದ ಜಯ ಗಳಿಸಿದ ಸನ್ ರೈಸರ್ಸ್ ಹೈದರಾಬಾದ್ ಫೈನಲ್ ಗೆ ಲಗ್ಗೆಯಿಟ್ಟಿದೆ.

ಟಾಸ್ ಗೆದ್ದ ಕೆಕೆಆರ್ ಫೀಲ್ಡಿಂಗ್ ಆಯ್ದುಕೊಂಡಿದೆ. ಮೊದಲು ಬ್ಯಾಟಿಂಗ್ ನಡೆಸಿದ ಸನ್ ರೈಸರ್ಸ್ 20 ಓವರುಗಳಲ್ಲಿ 7 ವಿಕೆಟ್ ನಷ್ಟಕ್ಕೆ 174 ರನ್ ಮೊತ್ತ ಕಲೆಹಾಕಿತು. SRH ಪರವಾಗಿ ವೃದ್ಧಿಮಾನ್ ಸಹಾ 35, ಶಿಖರ್ ಧವನ್ 34 ಹಾಗೂ ರಾಶಿದ್ ಖಾನ್ ಅಜೇಯ 34 ರನ್ ಗಳಿಸಿ ತಂಡಕ್ಕೆ ನೆರವಾದರು.

ಗುರಿಯನ್ನು ಬೆನ್ನತ್ತಿದ ಕೆಕೆಆರ್ 20 ಓವರುಗಳಲ್ಲಿ 9 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಕೆಕೆಆರ್ ಪರವಾಗಿ ಆರಂಭಿಕ ಬ್ಯಾಟ್ಸಮನ್ ಕ್ರಿಸ್ ಲಿನ್ 48 ಹಾಗೂ ಶುಭಮನ್ ಗಿಲ್ 30 ರನ್ ಗಳಿಸಿದರು. ಸನ್ ರೈಸರ್ಸ್ ಪರವಾಗಿ ರಾಶಿದ್ ಖಾನ್ 3, ಸಿದ್ಧಾರ್ಥ್ ಕೌಲ್ 2 ಹಾಗೂ ಕಾರ್ಲೊಸ್ ಬ್ರಾತ್ ವೈಟ್ 2 ವಿಕೆಟ್ ಪಡೆದರು.

ಮುಂಬೈನ ವಾಂಖೇಡೆ ಮೈದಾನದಲ್ಲಿ ಮೇ 27 ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.

 

 

Leave a Reply

Your email address will not be published.