ಬಿಜೆಪಿ ಗುರುತಿಸಿದ್ದಕ್ಕೇ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿರೋದು : ಶ್ರೀರಾಮುಲು

ಚಿತ್ರದುರ್ಗ : ತೃತೀಯ ರಂಗ ಅನ್ನೋದು ಮಳೆಗಾಲದಲ್ಲಿ ಬಂದು ಹೋಗುವ ಅಣಬೆ ಇದ್ದಂತೆ. ಚುನಾವಣೆ ಸಂದರ್ಭದಲ್ಲಿ ಬಂದು ಹೋಗುತ್ತಾರೆ. ಅದಕ್ಕೆ ಭವಿಷ್ಯ ಇಲ್ಲ ಎಂದು ಸಂಸದ ಶ್ರೀರಾಮುಲು ಹೇಳಿದ್ದಾರೆ.

ನಾಯಕನಹಟ್ಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿಯಿಂದ ಬಿಜೆಪಿ ಅಲ್ಲ, ಬಿಜೆಪಿ ಗುರುತಿಸಿದ ಕಾರಣಕ್ಕೆ ಕುಮಾರಸ್ವಾಮಿ ಇಂದು ಮುಖ್ಯಮಂತ್ರಿ ಆಗಿದ್ದಾರೆ. ರೈತರ ಸಾಲ ಮನ್ನಾ ಮಾಡದಿದ್ದರೆ ನಾವು ಸುಮ್ಮನಿರುವುದಿಲ್ಲ. ಭರವಸೆ ಕೊಟ್ಟಂತೆ‌ ನಡೆದುಕೊಳ್ಳಬೇಕು.  ಸಾಲ ಮನ್ನಾ ವಿಚಾರವಾಗಿ ಸೋಮವಾರ ಕರ್ನಾಟಕ ಬಂದ್ ಮಾಡುತ್ತೇವೆ. ಸರ್ಕಾರ ರಚನೆಗಾಗಿ ಬೇರೆ ಪಕ್ಷದ ಶಾಸಕರ ಜತೆ ಮಾತನಾಡಿದ್ದೇವೆ. ಆದ್ರೆ, ಇದನ್ನೇ ರೆಕಾರ್ಡ್ ಮಾಡಿಕೊಂಡು ಬಿಡುಗಡೆ ಮಾಡುವುದು ಸಣ್ಣತನ ಎಂದು ಕಿಡಿಕಾರಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com