ಮಹಿಳೆಯರೇ ಬೆಂಗಳೂರಿನಲ್ಲಿ ಪಿಜಿಗೆ ಹೋಗೋ ಮುನ್ನ ಈ ಸ್ಟೋರಿಯನ್ನೊಮ್ಮೆ ಓದಿ….!

ಬೆಂಗಳೂರು : ಪಿಜಿಯಲ್ಲಿಯೇ ಯುವತಿಯ ಮೇಲೆ ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಕೃತ್ಯ ಬೆಂಗಳೂರಿನಲ್ಲಿ ನಡೆದಿದೆ.

ದೀಪಾಂಜಲಿ ನಗರದ ಖಾಸಗಿ ಪಿಜಿಯಲ್ಲಿ ಮಾರ್ಚ್‌ 18ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಕೃತ್ಯಕ್ಕೆ ಪಿಜಿಯ ಮ್ಯಾನೇಜರ್‌ ಕುಮ್ಮಕ್ಕು ನೀಡಿದ್ದಾಗಿ ತಿಳಿದುಬಂದಿದ್ದು, ಆರೋಪಿಯೊಬ್ಬನ ಹೆಸರು ಕಾರ್ತಿಕ್‌ ಎಂದು ತಿಳಿದುಬಂದಿದೆ. ಇನ್ನುಳಿದವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಪಿಜಿಯ ಮ್ಯಾನೇಜರ್‌ ಆಗಿದ್ದ ಮಹಿಳೆ ನನ್ನ ಬಳಿ ಇದ್ದ ಒಡವೆ ಮತ್ತು ಹಣವನ್ನು ಕದ್ದಿದ್ದಳು. ಅದನ್ನು ಕೇಳಿದಾಗ ಕೊಡುತ್ತೇನೆ ಎಂದುಕೊಂಡು ಸತಾಯಿಸುತ್ತಿದ್ದಳು. ಆಮೇಲೆ ಕಾರ್ತಿಕ್‌ ಹಾಗೂ ಆತನ ಸ್ನೇಹಿತರ ಜೊತೆ ಅಡ್ಜೆಸ್ಟ್ ಮಾಡಿಕೊ, ಆಗ ಒಡವೆ ಹಿಂತಿರುಗಿಸುತ್ತೇನೆ ಎಂದಿದ್ದಳು. ಆದರೆ ನಾನು ಅದಕ್ಕೆ ನಿರಾಕರಿಸಿದ್ದೆ. ಈ ಹಿನ್ನೆಲೆಯಲ್ಲಿ ಮಾರ್ಚ್ 18ರಂದು ನನ್ನ ರೂಮಿಗೆ ಕಾರ್ತಿಕ್‌ ಹಾಗೂ ಆತನ ಸ್ನೇಹಿತರನ್ನು ಕಳುಹಿಸಿದ್ದು, ಅವರು ನನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ.

ರೂಮಿಗೆ ಬಂದ ಆರೋಪಿಗಳು ನನ್ನ ಮುಖಕ್ಕೆ  ಕ್ಲೋರೋಫಾರ್ಮ್‌ ಹಾಕಿದ ಬಟ್ಟೆ ಒತ್ತಿಹಿಡಿದರು. ನನಗೆ ಪ್ರಜ್ಞೆ ತಪ್ಪಿತು. ಬಳಿಕ ನನ್ನ ಮೇಲೆ ಅತ್ಯಾಚಾರ ಎಸಗಿದರು.ಆರೋಪಿ ಇದರ ವಿಡಿಯೋ ಮಾಡಿ ನನಗೆ ಬೆದರಿಕೆ ಹಾಕುತ್ತಿದ್ದಾನೆ ಎಂದು ದೂರಿನಲ್ಲಿ  ತಿಳಿಸಿದ್ದಾರೆ.

ಕಾಮುಕರು ನೀಡುತ್ತಿದ್ದ ಕಿರುಕುಳವನ್ನು ಸಹಿಸಿಕೊಳ್ಳಲಾಗದೇ ಇದೇ ಮೇ 23 ರಂದು ಸಂತ್ರಸ್ತೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆದರೆ ಪೊಲೀಸರು ಕಾಮುಕರನ್ನು ಕರೆಸಿ ವಿಡಿಯೋ, ಫೋನ್ ಎಲ್ಲವನ್ನು ವಶಪಡಿಸಿಕೊಂಡು ಯಾವುದೇ ಕ್ರಮ ತೆಗೆದುಕೊಳ್ಳದೆ ವಾಪಸ್ ಕಳುಹಿಸಿದ್ದಾರೆ. ನಂತರ ಪೊಲೀಸರಿಗೆ ದೂರು ನೀಡಿದ್ದಕ್ಕೆ ಕಾಮುಕರು ಸಂತ್ರಸ್ತೆಯ ಮೇಲೆ ಹಲ್ಲೆ ಮಾಡಿದ್ದಾರೆ. ಹೀಗಾಗಿ ನೊಂದ ಸಂತ್ರಸ್ತೆ ನಗರ ಪೊಲೀಸ್ ಆಯುಕ್ತರ ಮೊರೆ ಹೋಗಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com