ಶುರುವಾಯ್ತು ದೊಡ್ಡಗೌಡರ ಆಟ : ಮೈತ್ರಿ ಏನಿದ್ರೂ ವಿಧಾನಸೌಧದ ಒಳಗೆ ಮಾತ್ರ ಎಂದ ದೇವೇಗೌಡ್ರು

ಬೆಂಗಳೂರು : ಮೈತ್ರಿ ಏನಿದ್ದರೂ ವಿಧಾನಸೌಧದ ಒಳಗಷ್ಟೇ ಹೊರಗಲ್ಲ ಎಂದು ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ ಹೇಳಿದ್ದಾರೆ.

ರಾಜರಾಜೇಶ್ವರಿ ನಗರದಲ್ಲಿ ಜೆಡಿಎಸ್‌ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಿರುವ ದೇವೇಗೌಡರು, ನಮ್ಮ ಅಭ್ಯರ್ಥಿ ಜೆ.ಎಚ್‌. ರಾಮಚಂದ್ರ ಅವರನ್ನು ಗೆಲ್ಲಿಸಿಯೇ ಸರಿ. ಜೆಡಿಎಸ್‌ ಅಭ್ಯರ್ಥಿಗೆ ಮತನೀಡಿ ಎಂದು ಮನವಿ ಮಾಡಿದ್ದಾರೆ.

ಇದಕ್ಕೂ ಮುನ್ನ ಸದಾಶಿವನಗರದಲ್ಲಿ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್‌ ನಾವು ಜೆಡಿಎಸ್‌ಗಾಗಿ ಸಾಕಷ್ಟು ತ್ಯಾಗ ಮಾಡಿದ್ದೇವೆ. ಆದ್ದರಿಂದ ಅವರು ಕಾಂಗ್ರೆಸ್‌ ಅಭ್ಯರ್ಥಿಗೆ  ಬೆಂಬಲ ನೀಡಬೇಕು ಎಂದಿದ್ದಾರೆ. ಆದರೆ ನಮ್ಮ ಮೈತ್ರಿ ಏನಿದ್ದರೂ ವಿಧಾನಸೌಧದ ಒಳಗೆ ಹೊರಗಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com