ವಿರಾಟ್ ಕೊಹ್ಲಿ ಒಬ್ಬ ಮನುಷ್ಯನೇ ಹೊರತು ಮಷಿನ್ ಅಲ್ಲ : ರವಿ ಶಾಸ್ತ್ರಿ

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕುತ್ತಿಗೆಗೆ ಉಂಟಾದ ಗಾಯದ ಹಿನ್ನೆಲೆಯಲ್ಲಿ ಜೂನ್ ತಿಂಗಳಲ್ಲಿ ನಡೆಯಲಿರುವ ಇಂಗ್ಲೆಂಡಿನ ಕೌಂಟಿ ಟೂರ್ನಮೆಂಟ್ ನಲ್ಲಿ ಭಾಗವಹಿಸುವುದಿಲ್ಲ ಎಂದು ಐಸಿಸಿ ಗುರುವಾರ ತಿಳಿಸಿತ್ತು. ವಿರಾಟ್ ಕೊಹ್ಲಿ ಕೌಂಟಿಯಲ್ಲಿ ಸರ್ರೆ ತಂಡದ ಪರವಾಗಿ ಆಡಲಿದ್ದರು. ಆದರೆ ಈಗ ಕೊಹ್ಲಿ ಅನುಪಸ್ಥಿತಿಯಿಂದ ಸರ್ರೆ ತಂಡವಷ್ಟೇ ಅಲ್ಲದೇ, ಇಂಗ್ಲೆಂಡಿನ ಹಲವು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ ಕೌಂಟಿ ಅನುಪಸ್ಥಿತಿಯ ವಿಷಯದಲ್ಲಿ ವಿರಾಟ್ ಬೆಂಬಲಕ್ಕೆ ನಿಂತಿದ್ದಾರೆ. ‘ ವಿರಾಟ್ ಕೊಹ್ಲಿ ಕೂಡ ನಮ್ಮೆಲ್ಲರಂತೆ ಒಬ್ಬ ಮನುಷ್ಯನೇ ಹೊರತು ಮಷಿನ್ ಅಲ್ಲ, ಇಂಧನ ತುಂಬಿರುವ ರಾಕೆಟ್ ಅನ್ನು ವಿರಾಟ್ ಬೆನ್ನಿಗೆ ಕಟ್ಟಿ ಮೈದಾನಕ್ಕೆ ಇಳಿಯುವಂತೆ ಮಾಡಲು ಸಾಧ್ಯವಿಲ್ಲ, ಶ್ರೇಷ್ಟ ತಳಿಯ ನಾಯಿಗೂ ಕೂಡ ವಿರಾಮದ ಅಗತ್ಯವಿರುತ್ತದೆ ‘ ಎಂದು ರವಿ ಶಾಸ್ತ್ರಿ ಹೇಳಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com