WATCH : ಲಾಂಗ್ ತೋರಿಸಿ ವ್ಯಾಪಾರಿಗೆ ಬೆದರಿಕೆ ಹಾಕಿದ ಯುವತಿ : ಈಕೆ ‘ಸೂರತ್‍ ಲೇಡಿ ಡಾನ್’

ಕೈಯಲ್ಲಿ ಲಾಂಗ್ ಹಿಡಿದ 20 ವರ್ಷದ ಯುವತಿ ಹಾಗೂ ಆಕೆಯ ಸ್ನೇಹಿತನೊಬ್ಬ ಸೇರಿಕೊಂಡು ಅಂಗಡಿ ಮಾಲೀಕನೊಬ್ಬನಿಗೆ ತಲ್ವಾರ್ ತೋರಿಸಿ ಬೆದರಿಕೆ ಒಡ್ಡಿರುವ ಘಟನೆ ಗುಜರಾತಿನ ಸೂರತ್ ನಗರದಲ್ಲಿ ನಡೆದಿದೆ. ಆತನಿಂದ 500 ರೂಪಾಯಿ ಸುಲಿದದ್ದು ಅಲ್ಲದೇ, ಬಲವಂತದಿಂದ ಅಂಗಡಿಯನ್ನು ಮುಚ್ಚಿಸಿದ್ದಾರೆ.

ಸೂರತ್ ನ ವರಚ್ಛಾ ಪ್ರದೇಶದಲ್ಲಿರುವ ವರ್ಷಾ ಸೊಸೈಟಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ, ಅಂಗಡಿಯವನಿಗೆ ಬೆದರಿಕೆ ಹಾಕಿರುವ ದೃಶ್ಯಗಳು ಸೆರೆಯಾಗಿದೆ. ಸಿಸಿಟಿವಿ ಫುಟೇಜ್ ಆಧರಿಸಿ ತನಿಖೆ ನಡೆಸಿರುವ ಪೋಲೀಸರು ಯುವತಿ ಹಾಗೂ ಆಕೆಯ ಸ್ನೇಹಿತನನ್ನು ಬಂಧಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Image result for asmita gohil surat

ಸೂರತ್ ನಗರದ ‘ಲೇಡಿ ಡಾನ್’ ಎಂದೇ ಕುಖ್ಯಾತಳಾಗಿರುವ ಈ ಯುವತಿಯ ಹೆಸರು ಅಸ್ಮಿತಾ ಗೋಹಿಲ್. ಈಕೆ ಸೂರತ್ ಜನರಿಗೆ ಬೆದರಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಮಾರ್ಚ್ ತಿಂಗಳಲ್ಲಿ ನಡೆದ ಗುಂಪು ಘರ್ಷಣೆಯೊಂದರಲ್ಲಿ, ಹರಿತವಾದ ಆಯುಧವೊಂದನ್ನು ಹಿಡಿದಿದ್ದ ಅಸ್ಮಿತಾ ಬೆದರಿಕೆ ಒಡ್ಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು.

Image result for asmita gohil surat

‘ ಅಸ್ಮಿತಾ ಗೋಹಿಲ್ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಈ ಹಿಂದೆ ಅನೇಕ ಕ್ರಿಮಿನಲ್ ಚಟುವಟಿಕೆಗಳಲ್ಲಿ ಆಕೆಯ ಹೆಸರು ಶಾಮೀಲಾಗಿದೆ ‘ ಎಂದು ಪೋಲೀಸ್ ಅಧಿಕಾರಿ ಎಮ್.ಪಿ ಪಟೇಲ್ ತಿಳಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com