IPL : ಈಡನ್ ಅಂಗಳದಲ್ಲಿಂದು ಕ್ವಾಲಿಫೈಯರ್-2 : ಫೈನಲ್ ಸ್ಥಾನಕ್ಕಾಗಿ SRH vs KKR ಫೈಟ್

ಕೋಲ್ಕತಾದ ಈಟನ್ ಗಾರ್ಡನ್ ಮೈದಾನದಲ್ಲಿ ಶುಕ್ರವಾರ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಗಳ ನಡುವೆ ಐಪಿಎಲ್ ಟೂರ್ನಿಯ ಕ್ವಾಲಿಫೈಯರ್-2 ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಜಯಿಸಿದ ಟೀಮ್ ಮೇ 27ರಂದು ನಡೆಯಲಿರುವ ಫೈನಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.

ಕೇನ್ ವಿಲಿಯಮ್ಸನ್ ಮುಂದಾಳತ್ವದ SRH ಪಡೆ ಹಾಗೂ ದಿನೇಶ್ ಕಾರ್ತಿಕ್ ನೇತೃತ್ವದ ಕೆಕೆಆರ್ ಫೈನಲ್ ಸ್ಥಾನಕ್ಕಾಗಿ ಸೆಣಸಾಡಲಿವೆ. ಕೆಕೆಆರ್ ತಂಡಕ್ಕೆ ಈಡನ್ ಗಾರ್ಡನ್ ನಲ್ಲಿ ತವರಿನ ಅಭಿಮಾನಿಗಳ ಬೆಂಬಲ ದೊರೆಯಲಿದೆ.

ದಿನೇಶ್ ಕಾರ್ತಿಕ್, ಆ್ಯಂಡ್ರೆ ರಸೆಲ್, ರಾಬಿನ್ ಉತ್ತಪ್ಪ, ಕ್ರಿಸ್ ಲಿನ್ ರಂತಹ ಬ್ಯಾಟ್ಸಮನ್ ಗಳನ್ನು ಹೊಂದಿರುವ ಕೆಕೆಆರ್ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದೆ. ಕೆಕೆಆರ್ ಪಡೆಗೆ ಕುಲದೀಪ್ ಯಾದವ್, ಸುನೀಲ್ ನರೈನ್, ಪಿಯೂಷ್ ಚಾವ್ಲಾ ಅವರಂತಹ ಸ್ಪಿನ್ನರ್ ಗಳ ಬೆಂಬಲವಿದೆ.

ಹೈದರಾಬಾದ್ ತಂಡದಲ್ಲಿ ಶಿಖರ್ ಧವನ್, ಕೇನ್ ವಿಲಿಯಮ್ಸನ್, ಮನೀಶ್ ಪಾಂಡೆಯಂತಹ ಸ್ಪೋಟಕ ಬ್ಯಾಟ್ಸಮನ್ ಗಳಿದ್ದು, ಭುವನೇಶ್ವರ್ ಕುಮಾರ್, ಸಿದ್ಧಾರ್ಥ್ ಕೌಲ್, ರಾಶಿದ್ ಖಾನ್, ಶಾಕಿಬ್ ಅಲ್ ಹಸನ್ ರಂತಹ ಉತ್ತಮ ಬೌಲರ್ ಗಳನ್ನು ಹೊಂದಿದೆ.

ಈ ಎರಡು ತಂಡಗಳ ಕ್ವಾಲಿಫೈಯರ್ ಹಣಾಹಣಿ ಕ್ರಿಕೆಟ್ ಅಭಿಮಾನಿಗಳಿಗೆ ಮನರಂಜನೆ ಒದಗಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

Leave a Reply

Your email address will not be published.

Social Media Auto Publish Powered By : XYZScripts.com