ಬಯಲಾಯ್ತು ಮತ್ತೊಂದು ಮಾಧ್ಯಮದ ಅಸಲಿ ಬಣ್ಣ : “ಮನುಕುಲದ ಒಳಿತಿಗಾಗಿ” ಇಂಥದ್ದೆಲ್ಲ ಮಾಡಿದ್ರಾ !

ಪತ್ರಿಕೋದ್ಯಮದ ಕರಾಳ ಮುಖದ ಬಗ್ಗೆ ಸಾಕಷ್ಟು ಜನರಿಗೆ ಗೊತ್ತಿಲ್ಲ. ಹೊರಗಿನಿಂದ ನೋಡುವವರಿಗೆ ತುಂಬಾ ಸುಂದರವಾಗಿ ಕಾಣೋ ಈ ಪತ್ರಿಕೋದ್ಯಮದ ಅಂತರಂಗದಲ್ಲಿ ಅನೇಕ ಹುಳುಕುಗಳಿವೆ. ಸ್ವಯಂ ಲಾಭಕ್ಕೋ, ಹಳಸಲು ಪ್ರತಿಷ್ಠೆ ಸಾಧನೆಗೊ ಇನ್ನೊಬ್ಬರ ಬಲಿ ಕೊಡುವ ಮನಸ್ಸುಗಳೂ ಇವೆ.
 ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಅಂತಾ ಬೆನ್ನುತಟ್ಟಿಕೊಳ್ಳೋ ಪತ್ರಿಕೋದ್ಯಮ ಇವತ್ತು ಅಕ್ಷರಶಃ ಬಿಸಿನೆಸ್‌ ಆಗಿದೆ. ಪತ್ರಿಕೋದ್ಯಮದ ಮೌಲ್ಯಗಳಿಗಿಂತ ವೈಯಕ್ತಿಕ ಹಿತಾಸಕ್ತಿಗಳು ಹಾಗೂ ಸ್ವಜನ ಪಕ್ಷಪಾತವೇ ಇಂದು ಪತ್ರಿಕಾರಂಗವನ್ನ ಆಳುತ್ತಿವೆ. ಹೆಸರಲ್ಲೇ ಇದೆಯಲ್ಲ ಪತ್ರಿಕಾ ‘ಉದ್ಯಮ’ ಅನ್ನೋದು.
 ‎
 ಇಷ್ಟೆಲ್ಲಾ ಪೀಠಿಕೆ ಯಾಕಪ್ಪಾ ಅಂದ್ರೆ, ಎಲ್ಲಾ ರಂಗದ ಸಮಸ್ಯೆಗಳನ್ನ ಜನರಿಗೆ ತಲುಪುವ ಹಾಗೆ ಮಾಡೋ ನಿಷ್ಠಾವಂತ ಪತ್ರಕರ್ತರೇ, ಇಂದು ಸಂಸ್ಥೆಯ ಮೋಸಕ್ಕೆ ಬಲಿಯಾಗಿ, ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ವೈಯಕ್ತಿಕ ಸುಖ-ಸಂತೋಷಗಳನ್ನ ತ್ಯಾಗ ಮಾಡಿ, ಪ್ರೇಕ್ಷಕರನ್ನ ರಂಜಿಸಲು ಹಾಗೂ ವಾಹಿನಿಯನ್ನ ಜನಪ್ರಿಯಗೊಳಿಸಲು, ದಿನಕ್ಕೆ ೧೪-೧೬ ಗಂಟೆಗಳ ಕಾಲ ದುಡಿದ  ಪತ್ರಕರ್ತರನ್ನ ದುಡಿಸಿಕೊಂಡ ಸಂಸ್ಥೆ ಏಕಾಏಕಿ ಕೆಲಸದಿಂದ ವಜಾ ಮಾಡಿದ್ರೆ ಯಾವ ರೀತಿ ಸ್ಥಿತಿ ಎದುರಾಗಬಹುದು ಅಲ್ವಾ..? ಸಂಸ್ಥೆಯೇ ಸರ್ವಸ್ವ ಅಂತ ಕೆಲ್ಸ ಮಾಡಿ ಕೆಟ್ಟ ರೀತಿಯಲ್ಲಿ ಹೊರ ಹೋಗು ಅಂತ ಹೇಳಿಸಿಕೊಳ್ಳೋದು ಇದ್ಯಲ್ಲ.. ಅದು ಅತ್ಯಂತ ಶೋಚನೀಯ. ಅದೂ ಕೂಡಾ ಯಾವುದೇ ಕಾರಣವಿಲ್ಲದೆ..
 ‎
ಆಗಿದ್ದಿಷ್ಟು… ಕನ್ನಡದ ಪ್ರಥಮ ಮಾಹಿತಿ-ಮನರಂಜನಾ ವಾಹಿನಿಯಾದ ಸರಳ ಜೀವನ ಚಾನೆಲ್ ನ ಆಡಳಿತ ಮಂಡಳಿ ತನ್ನ ಸಂಸ್ಥೆಯಲ್ಲಿ ಕೆಲಸ ಮಾಡ್ತಿದ್ದ ನಾಲ್ವರು ಪತ್ರಕರ್ತರನ್ನ ಸರಿಯಾದ ಕಾರಣವೇ ನೀಡದೆ ಏಕಾಏಕಿ ಕೆಲಸದಿಂದ ವಜಾ ಮಾಡಿದೆ. ಕಾರಣ ಕೇಳಲಾಗಿ ನೀವೆಲ್ಲ ನಮ್ಮ ಸಂಸ್ಥೆಯ ಅತ್ಯುತ್ತಮ ನೌಕರರು, ಆದ್ರೆ ಕಂಪನಿಗೆ ನಿಮ್ಮ ಸೇವೆ ಸಾಕು ಅನ್ನೋ ಹಾರಿಕೆ ಉತ್ತರ ನೀಡಿ ನಿರ್ಗಮನ ದ್ವಾರದತ್ತ ಬೆರಳು ತೋರಿಸಿದ್ದಾರೆ.
 
ಇಷ್ಟು ದಿನ ಸರಳವಾಸ್ತು ಹೆಸ್ರಲ್ಲಿ ಮಾತ್ರ ಕರ್ನಾಟಕದ ಜನತೆಗೆ ವಂಚನೆ ಮಾಡದತಿದ್ದ ಮ್ಯಾನೇಜ್ ಮೆಂಟ್ ಈಗ ಮತ್ತೊಂದು ಭಯಾನಕ ಸ್ಕೀಂನ ಪರಿಚಯಿಸೋದಕ್ಕೆ ಹೊರಟಿದೆ..ಅದೇನೂ ಅಂದ್ರೆ ನಿಮ್ಮ ಮನೆಗೆ ಸರಳವಾಸ್ತು ಮಾಡಿಸಿಕೊಂಡು ಬಿಟ್ರೆ,  ನಿಮಗೆ ಯಾವ ಕಾಯಿಲೆನೂ ಬರೋದಿಲ್ಲಾ..ಅಕ್ಕಸ್ಮಾತ್ ಕಾಯಿಲೆಗಳು ಬಂದಿದ್ರು, ಯಾವುದೇ ಔಷಧಗಳು ಇಲ್ಲದೇ, ಆಸ್ಪತ್ರೆಗೂ ಹೋಗದೆ ಅವೆಲ್ಲ ಗುಣ ಆಗ್ತವೆ ಅನ್ನೋದು ಸ್ಕೀಂ..
ಈಗ ವಿಚಾರಕ್ಕೆ ಬರೋದಾದ್ರೆ ಈ ಸ್ಕೀಂಗೂ, ಆ ನಾಲ್ವರು ಹುಡುಗರಿಗೂ ಏನಪ್ಪ ಸಂಬಂದ ಅಂದ್ರೆ, ಈ ಸ್ಕೀಂನ ಪ್ರಮೋಟ್ ಮಾಡಬೇಕು ಅಂತಾ ಸರಳ ವಾಸ್ತು ಮ್ಯಾನೇಜ್ ಮೆಂಟ್ ಹುಡುಗರ ಮೇಲೆ ಒತ್ತಡ ಹಾಕಿತ್ತಂತೆ..ಅದ್ಹೇಗ್ರಿ ಮಾಡೋಕ್ಕಾಗತ್ತೆ..ಅವರೆಲ್ಲಾ ಪತ್ರಕರ್ತರು.. ಸರಿ ಯಾವುದು,  ತಪ್ಪು ಯಾವುದು ಅನ್ನೋದು ಗೊತ್ತಿರೋದಿಲ್ವಾ..ಹಾಗಾಗಿ ಆ ಹುಡುಗ್ರು , ಇದನ್ನೆಲ್ಲಾ ನಾವು ಮಾಡೋದಿಲ್ಲಾ ಅಂದ್ರಂತೆ..ಅಷ್ಟೇ ಮ್ಯಾನೇಜ್ ಮೆಂಟ್ ಆ ಹುಡುಗರನ್ನೆಲ್ಲ ಕಳಿಸಿ ಬಿಟ್ಟಿದೆ..
ಈ ಆಟದಲ್ಲಿ ಬಣ್ಣದ ಹೆಣ್ಣೊಬ್ಬಳ ಕೈವಾಡ ಕೂಡ ಇದೆ..ಕೆಲಸ ಕಳೆದುಕೊಂಡವರಲ್ಲಿ ಒಬ್ಬ ಹುಡುಗ ಚಾನೆಲ್ ನ ಪ್ರೊಡಕ್ಷನ್ ನೋಡ್ಕೋತಿದ್ದ..ಸಂಸ್ಥೆಯ ಮಾಲೀಕರಿಗೆ ತೀರಾ ಹತ್ತಿರವಾಗಿದ್ದ ಬಣ್ಣದ ಹೆಣ್ಣಿಗೆ ಶಿಫ್ಟ್ ಹಾಕ್ಕಿದ್ದೇ ಅವನ ಕೆಲಸ ಹೋಗೋ ಹಾಗೆ ಮಾಡಿತು..ಪ್ರತಿನಿತ್ಯ ಹನ್ನೆರಡರಿಂದ ಹದಿನಾಲ್ಕು ತಾಸು ದುಡೀತಿದ್ದ ಹುಡುಗ್ರು ಈಗ ಬೀದಿಲಿ ನಿಂತಿದ್ದಾರೆ..
ಕೆಲ್ಸ ಹುಡುಕಲು ಸಮಯ ನೀಡಿಲ್ಲ. ನೋಟಿಸ್ ಪಿರಿಯೆಡ್ ಮಾಡಲು ಅವಕಾಶ ಕೊಟ್ಟಿಲ್ಲ. ಪರಿಹಾರಾರ್ಥವಾಗಿ ಕೊಡ್ತೀವಿ ಅಂತ ಮೌಖಿಕವಾಗಿ ಹೇಳಿದ್ದ ಮೂರು ತಿಂಗಳ ಸಂಬಳ ನೀಡಿಲ್ಲ.
ವೀಕ್ಷಕರಿಗೆ ಟಿವಿ ಅಂದರೆ ಬಣ್ಣದ ಲೋಕ. ಆದ್ರೆ ತೆರೆ ಹಿಂದೆ ನಡೆಯೋ ರಾಜಕೀಯ, ದರ್ಪ, ನೌಕರನ ನೋವು ಇದ್ಯಾವುದೂ ತೆರೆ ಮೇಲೆ ಕಾಣದೆ ಇರೋದಕ್ಕೆ ವೀಕ್ಷಕರ ಗಮನಕ್ಕೆ ಬರೋದೆ ಇಲ್ಲ.
ಸದ್ಯಕ್ಕೆ ಆ ನಾಲ್ಕು ಜನರ ಹಾಗೂ ಅವರ ಸಂಬಳವನ್ನ ನಂಬಿಕೊಂಡಿದ್ದ ಅವ್ರ ಕುಟುಂಬದ ಸದಸ್ಯರ ಸ್ಥಿತಿ ಯಾರಿಗೂ ಬೇಡ.
ಇದು ಸರಳ ವಾಸ್ತು ಚಂದ್ರಶೇಖರ ಗುರೂಜಿ ನಡೆಸುತ್ತಿರೋ ಸರಳ ಜೀವನ ವಾಹಿನಿಯ ನೌಕರರ ಕತೆ..
ಸರಳ ವಾಸ್ತು ಸಂಸ್ಥೆಯಲ್ಲಿ ಇಷ್ಟು ದಿನ ನಡೆಯುತ್ತಿದ್ದ ದೌರ್ಜನ್ಯ, ಅನ್ಯಾಯ ಈಗ ಸರಳ ಜೀವನ ವಾಹಿನಿಗೂ ಕಾಲಿಟ್ಟಿದೆ.
ಸಂಸ್ಥೆಯ ನೌಕರರ ನೋವು ಮನುಕುಲದ ಒಳಿತಿಗಾಗಿ ಅಂತಾ ಅರಚಾಡೋ, ಸ್ವಯಂಘೋಷಿತ ಗುರೂಜಿಯ ಕಿವಿಗೆ ಬಿದ್ದಿಲ್ಲವಾ..?

Leave a Reply

Your email address will not be published.

Social Media Auto Publish Powered By : XYZScripts.com