ವಿಶ್ವಾಸ ಗೆದ್ದ ಕುಮಾರನಿಗೆ ಇಡಿ ಶಾಕ್‌ : ಬಂಧನದ ಭೀತಿಯಲ್ಲಿ ಸಿಎಂ ಕುಮಾರಸ್ವಾಮಿ !?

ಬೆಂಗಳೂರು : ಕೆಲವೇ ಗಂಟೆಗಳ ಹಿಂದಷ್ಟೇ  ಬಹುಮತ ಸಾಬೀತು ಪಡಿಸಿ ಅಧಿಕಾರ ನಡೆಸಲು ಇದ್ದ ಎಲ್ಲಾ ರೀತಿಯ ತೊಡಕುಗಳನ್ನು ದಾಟಿ ಮುಂದೆ ಬಂದಿರುವ ಸಿಎಂ ಕುಮಾರಸ್ವಾಮಿಯವರಿಗೆ ಬಂಧನದ ಭೀತಿ ಎದುರಾಗಿದೆ. ಹೀಗಂತ  ಖಾಸಗಿ ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.

ಮಲೇಷ್ಯಾದಲ್ಲಿ ಕುಮಾರಸ್ವಾಮಿ ಅವರು ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಹೊಂದಿದ್ದಾರೆ ಎಂಬ ಮಾಹಿತಿ ಜಾರಿ ನಿರ್ದೇಶನಾಲಯ ಅಧಿಕಾರಿಗಳಿಗೆ ಸಿಕ್ಕಿದ್ದು, ಎಚ್‌ಡಿಕೆ ಅವರಿಗೆ ಕರೆ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ ಚನ್ನಪಟ್ಟಣದಲ್ಲಿ ಸಿ.ಪಿ ಯೋಗೇಶ್ವರ್‌ ಸಹ ಸಿಎಂ ಕುಮಾರಸ್ವಾಮಿಯವರು ಮಲೇಷ್ಯಾದಲ್ಲಿ ಅಪಾರ ಪ್ರಮಾಣದ ಆಸ್ತಿ ಮಾಡಿಟ್ಟಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೆ ಇಂದು ಸದನದಲ್ಲಿ ಸಹ ಕುಮಾರಸ್ವಾಮಿ ಈ ವಿಚಾರವಾಗಿ ಪ್ರಸ್ತಾಪಿಸಿದ್ದು, ಈಗ ಇಡಿ ಅಧಿಕಾರಿಗಳು ಎಚ್‌ಡಿಕೆ ಅವರ ಆಸ್ತಿ ಕುರಿತು ತನಿಖೆ ನಡೆಸುತ್ತಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

Leave a Reply

Your email address will not be published.

Social Media Auto Publish Powered By : XYZScripts.com